Thursday, March 12, 2015

ಭಾರತೀಯ ಸಂಸ್ಕøತಿಯ ವಿವಾಹ ಪೂರ್ವ ಸಹಬಾಳ್ವೆ

ಭಾರತ ಬಹುಮುಖೀ ಸಂಸ್ಕøತಿಯ ದೇಶ. ಆದರೆ ವಿಶಾಲ ಭಾರತದಲ್ಲಿ ಇರುವ ಆಯಾ ಪ್ರಾದೇಶಿಕ ಜನರ ಸಾಮಾಜಿಕ ಮತ್ತು ಸಾಂಸ್ಕøತಿಕ ಜೀವನದ ಪರಿಚಯ ಇತರ ಭಾಗದ ಭಾರತೀಯರಿಗೆ ಇರುವುದಿಲ್ಲ. ಆದರೆ ಭಾರತದ ಸಂವಿಧಾನವು ವೈದಿಕ ಸಂಸ್ಕøತಿಯನ್ನು ತಳಹದಿಯ ಮೇಲೆ  ನಿಬಂಧನೆಗಳನ್ನು ಅಡಕಗೊಳಿಸಿದೆ.

ಬೆಂಗಳೂರು ನಗರದಲ್ಲಿ ವಿವಾಹ ಪೂರ್ವ ಸಹಬಾಳ್ವೆಯ (Living together )ಪದ್ಧತಿ ಆರಂಭವಾಗಿ ದಶಕಗಳು ಕಳೆದಿವೆ. ವಿವಾಹ ಪೂರ್ವ ಸಹಬಾಳ್ವೆ ಪಾಶ್ಚಿಮಾತ್ಯ ಜಗತ್ತಿನ ಕೆಟ್ಟ ಕೊಡುಗೆ ಎಂಬ ಅಭಿಪ್ರಾಯ ನಮ್ಮ ದೇಶದ ಸಂಸ್ಕøತಿ ಪ್ರಿಯರದ್ದು. ಆದರೆ ಈಶಾನ್ಯ ಭಾರತದ ಸಂಸ್ಕøತಿ ಸಂಪ್ರದಾಯಗಳ ಬಗ್ಗೆ ಸ್ವಲ್ಪ ಮಟ್ಟಿನ ಅರಿವು ಪಡೆದುಕೊಂಡಿದ್ದ ನನಗೆ  ಭಾರತದಲ್ಲೂ ಈ ಪದ್ಧತಿ ಇದೆ ಎಂದು ತಿಳಿದಿತ್ತು.  ಈ ಭಾಗಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಲು ಉತ್ಸುಕಳಾಗಿದ್ದೆ.

ಈಶಾನ್ಯದ ಏಳು ರಾಜ್ಯಗಳು ಮಾತ್ರವಲ್ಲದೆ ಸಿಕ್ಕಿಂ ರಾಜ್ಯಕ್ಕೂ ನಾವು ಪ್ರವಾಸ ಹೊರಟಾಗ ನನ್ನ ಸಾಂಸ್ಕøತಿಕ ಶೋಧದ ಸಿದ್ಧತೆ ಮಾಡಿಕೊಂಡಿದ್ದೆ. ಹಾಗೆ ಬಂದು ಹೀಗೆ ಹೋಗುವಾಗ ಕಲೆಹಾಕ ಬಹುದಾದ  ಮಾಹಿತಿ ಅತ್ಯಲ್ಪ. ಆದರೆ ವಿವಾಹ ಪೂರ್ವ ಸಹಬಾಳ್ವೆಯ ಬಗ್ಗೆ ತಿಳಿದುಕೊಳ್ಳಲು ಅಲ್ಪ ಮಾಹಿತಿಯಾದರೂ ಸರಿ. ಮುಂದಿನ ಅಧ್ಯಯನಕಾರರು ಈ ಅಲ್ಪ ಮಾಹಿತಿಯ ಜಾಡು ಹಿಡಿದು ಸಮಗ್ರ ಮಾಹಿತಿ ಸಂಗ್ರಹಿಸ ಬಹುದು.
ಮಣಿಪುರದಲ್ಲಿ ಮೊದಲ ದಿನ ಬೋಬೋ ಎಂಬ ತರುಣ ನಮ್ಮ ಸಾರಥಿಯಾಗಿ ನಮ್ಮನ್ನು ಮಣಿಪುರ ಸುತ್ತಾಡಿಸಿದ. ಮಾರನೆಯ ದಿನ ಆತನ ತಂದೆ ಸಾರಥ್ಯ ವಹಿಸಿದರು. ಹೀಗೆ ಕುಟುಂಬ ಪರಿಚಯ ಬೆಳೆಸಿ ನಾನು ಮಾತಿಗಾರಂಭಿಸಿದೆ.
“ ನಿನ್ನೆ ಬಂದವ ನಿಮ್ಮ ಮಗನೆ?”
“ಹೌದು”
“ಅವನ ವಿವಾಹ ಆಗಿದೆಯ?”
“ ಇಲ್ಲ.”
“ ವಿವಾಹ ವಯಸ್ಸು ಆಗಿಲ್ಲವೆ?”
“ಅವನು ಇನ್ನೂ ಹುಡುಗಿಯನ್ನೇ ಹುಡುಕಿಲ್ಲ. ಅವನು ಹುಡುಕಿ ಕೊಟ್ಟ ಹೆಣ್ಣಿಗೆ ನಾವು ವಿವಾಹಮಾಡಿಕೊಡುತ್ತೇವೆ?”
ನಮ್ಮ ಕಾರಿನಲ್ಲಿ ಇದ್ದ ನನ್ನ ಸಹಪ್ರವಾಸಿಗರಿಗೆ ಅಚ್ಚರಿ.
“ಹೌದೆ? ಹಾಗಾದರೆ ಅವನು ಮದುವೆಯಾಗÀ ಬೇಕಾದರೆ ಅವನೇ ಹೆಣ್ಣು ಹುಡಕಬೇಕು. ನೀವು ಹುಡುಕುವುದಿಲ್ಲ.” ಎಂದರು ನಮ್ಮ ಜೊತೆಗಿದ್ದ ಮಂಜೇಗೌಡರು.
“ಅವನಿಗೆ ಬೇಕಾಗುವ ಹೆಣ್ಣನ್ನು ಅವನು ಹುಡುಕಬೇಕು. ನಾವ್ಯಾಕೆ ಹುಡುಕುವುದು?”
ಆತ ಮುಂದುವರಿಸಿದ “ಮದುವೆಯಾಗುವವ ಅವನು. ಹುಡುಗಿ ನೋಡುವುದು ನಾವಾ?”
ಈ ಪ್ರಶ್ನೆಗೆ ಉತ್ತರ ನಮ್ಮಲ್ಲಿ ಇಲ್ಲ.
“ ನೋಡಿ ಮೇಡಮ್ ಅವನ ಮನಸ್ಸಿಗೆ ಹೆಣ್ಣು ಹಿತವಾಗ ಬೇಕು. ಹಿತವಾದ ಹೆಣ್ಣಿನೊಡನೆ ಕೆಲವು ಕಾಲ ಆತ ಬಾಳಿ ನೋಡಬೇಕು. ಅವರಿಬ್ಬರೂ ಫಲವಂತಿಕೆ ಉಳ್ಳವರಾ ಎಂದು ತಿಳಿಯಬೇಕು. ಬೇರೆ ವಿಷಯದಲ್ಲೂ ಅವರಿಬ್ಬರಲ್ಲೂ ಹೊಂದಾಣಿಕೆಯಾಗುತ್ತದೆಯಾದರೆ ಮತ್ತೆ ಮದುವೆ. ಅವರು ಒಟ್ಟಿಗೆ ನೆಲಸಿ ಕನಿಷ್ಟ ಒಂದು ವರ್ಷವಾದರೂ ಆಗಬೇಕು.”
“Living together?”  ಎಂದು ಉದ್ಗಾರ ನಮ್ಮ ಗುಂಪಿನಿಂದ! ವಿದೇಶಿ ಪ್ರಯಾಣಿಕರಜೊತೆ ವ್ಯವಹರಿಸಲೆಂದು  ಮುರುಕು ಇಂಗ್ಲಿಷ್ ಭಾಷೆಯನ್ನು ಕಲಿತಿರುವ ಡ್ರೈವರ್‍ಗೆ ಎಷ್ಟು ಅರ್ಥವಾಯಿತೋ ತಿಳಿಯಲಿಲ್ಲ. ಆತ ಹೇಳಿದ:
“ನೋಡಿ ಮೇಡಮ್. ಈ ಜಗದ ನಿಯಮದಲ್ಲಿ ಹೆಣ್ಣಿಗೊಂದು ಗಂಡು ಗಂಡಿಗೊಂದು ಹೆಣ್ಣು ಬೇಕು. ಅಷ್ಟೇ. ಹೆಣ್ಣಿಗೆ ಗಂಡನ್ನು ಹೆಣ್ಣೇ ಹುಡುಕಬೇಕು, ಗಂಡಿಗೆ ಹೆಣ್ಣನ್ನು ಗಂಡೇ ಹುಡುಕಬೇಕು. ಅದು ಪ್ರಕೃತಿ ನಿಯಮ”
“ ಆದರೂ ಹೆತ್ತ ತಂದೆ ತಾಯಿಗೆ ಜವಾಬ್ದಾರಿ ಇರುವುದಿಲ್ಲವೆ?”
“ಅವರು ನಮ್ಮಿಬ್ಬರಿಗೂ ಮದುವೆ ಮಾಡಿ ಎಂದ ಮೇಲೆ ಮುಂದಿನ ಕೆಲಸ ನಮ್ಮದು, ಹಿರಿಯರದ್ದು.”
“ ಹೆಣ್ಣಾಗಲೀ ಗಂಡಾಗಲೀ ತಮಗೆ ಬೇಕೆನಿಸಿದವರನ್ನು ವಿವಾಹ ಆಗಬಹುದೆ?”
“ ಖಂಡಿತಾ. ಆದರೆ ಇಬ್ಬರ ಒಪ್ಪಿಗೆಯೂ ಇರಬೇಕು. ಹೆಣ್ಣನ್ನು ಬಲಾತ್ಕಾರವಾಗಿ ಮದುವೆಯಾಗುವಂತಿಲ್ಲ. ”
“ಇತರೆ ಜಾತಿ, ಕುಲ ಅಂತಸ್ತು, ವಯಸ್ಸು ಇತ್ಯಾದಿ,,,,,”
ನನ್ನ ಮಾತನ್ನು ಮುಂದುವರಿಸಲು ಬಿಡದೆ ಆತ ನುಡಿದ “ಅದೆಲ್ಲ ನಿಮ್ಮ ಭಾರತದ ಕಡೆ. ಹೆಣ್ಣಿಗೊಂದು ಗಂಡು ಗಂಡಿಗೊಂದು ಹೆಣ್ಣು-ಇದು ಪ್ರಕೃತಿ ನಿಯಮ. ವಯಸ್ಸು ಅಂತಸ್ತು ಇತ್ಯಾದಿ ಗೌಣ. ಕುಲದ ಜಾತಿಯ ಪ್ರಶ್ನೆ ಇಲ್ಲ.”
 ಕುಲದ ಬಗ್ಗೆ ವಿಚಾರಿಸಲು ಅನುವು ಕೊಡದೆ ಆತ ಮುಂದುವರಿಸಿದ:
“ನಾವು ಈಶಾನ್ಯ ಭಾರತದ ಜನಗಳು ವೇದಾಧರಿತ ಸಮಾಜದವರಲ್ಲ. ನಮ್ಮಲ್ಲಿ ಜಾತಿ ನೋಡುವುದಿಲ್ಲ. ವಯಸ್ಸು ನೋಡುವುದಿಲ್ಲ. ಹುಡುಗ ಹುಡುಗಿಯನ್ನು ನೋಡಿ ಮೆಚ್ಚಬೇಕು. ಹುಡುಗಿ ಹುಡುಗನನ್ನು ನೋಡಿ ಮೆಚ್ಚಬೇಕು. ಬಹುತೇಕ ಈ ಭಾಗದ ಎಲ್ಲಾ ಜನಾಂಗಗಳಲ್ಲಿಯೂ ಈ ಪದ್ಧತಿ ಇದೆ.”
“ ಒಬ್ಬರನ್ನೊಬ್ಬರು ಮೆಚ್ಚಿದ ಮೇಲೆ ವಿವಾಹಪೂರ್ವದಲ್ಲಿ ಸಹಬಾಳ್ವೆ ಯಾಕೆ?”
“ಹುಡುಗಿ ಹುಡುಗ ಒಬ್ಬರನ್ನೊಬ್ಬರು ಇಷ್ಟ ಪಡುವುದು ಮೇಲ್ನೋಟದ ಆಕರ್ಷಣೆ. ಮುಂದಿನ ಜೀವನ ಸುಗಮವಾಗಿ ನಡೆಸಲು ಇಷ್ಟು ಸಿದ್ಧತೆ ಸಾಕಾಗುವುದಿಲ್ಲ. ಅವರಲ್ಲಿ ಲೈಂಗಿಕ ಸಾಮಾಥ್ರ್ಯ ಇರಬೇಕು. ಅವರಿಗೆ ಮಕ್ಕಳಾಗಬೇಕು. ಹೆಣ್ಣು ಗಂಡಿನೊಡನೆ, ಗಂಡು ಹೆಣ್ಣಿನೊಡನೆ ಹೊಂದಾಣಿಕೆಯಿಂದ ಬಾಳಬೇಕು. ಈ ಪರೀಕ್ಷೆ ಆಗಬೇಕಾದರೆ ಅವರು ಒಂದು ವರ್ಷವಾದರೂ ಒಟ್ಟಿಗೆ ಬಾಳಬೇಕು.”
ನಾವದನ್ನು ಪ್ರೊಬೆಷನರಿ ಪಿರೇಡ್ ಎಂದು ಮಾತನಾಡಿಕೊಂಡೆವು.
“ಈ ಒಂದು ವರ್ಷದೊಳಗೆ ಮಕ್ಕಳಾದರೆ?” ನಮ್ಮಲ್ಲೊಬ್ಬರ  ಪ್ರಶ್ನೆ.
“ಮಕ್ಕಳಾದರೆ ಮಗುವಿನ ತಾಯಿ ಸಾಕುತ್ತಾಳೆ. ಇಲ್ಲಿ ಹೆಣ್ಣುಮಕ್ಕಳು ಗಂಡನ ದುಡಿಮೆಯನ್ನು ಅವಲಂಬಿಸಿ ಜೀವನ ನಡೆಸುವುದಿಲ್ಲ. ಅವರು ಶ್ರಮ ಜೀವಿಗಳು. ಎಲ್ಲಾ ಕ್ಷೇತ್ರಗಳಲ್ಲೂ ದುಡಿಯುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲೂ ನಮ್ಮ ಮಹಿಳೆಯರ ಒಂದು ಸೈನ್ಯ ಬ್ರಟಿಷ್ ಸೈನ್ಯದ ವಿರುದ್ಧ ಹೋರಾಡಿತ್ತು. ನಾನು ಈ ಗಾಡಿ ತೆಗೆದುಕೊಂಡಿದ್ದು ನನ್ನ ಮಡದಿಯ ದುಡಿಮೆಯಿಂದ. ಈ ವರ್ಷ ಇನ್ನೊಂದು ಗಾಡಿ ತೆಗೆದುಕೊಟ್ಟಳು. ಅದನ್ನು ಬೋಬೋ ತೆಗೆದುಕೊಂಡು ಹೋಗಿದ್ದಾನೆ.”
ಆತ ಹೇಳಿದ ವಿವರ ಕೇಳಿ ನನಗೆ ಆóóಶ್ಚರ್ಯವಾಗÀಲಿಲ್ಲ. ಬದಲಿಗೆ ಖಚಿತತೆ ಒದಗಿತು. ಉಳಿದವರಿಗೆ ಅರಗಿಸಲಾಗಲಿಲ್ಲ.
“ನಿಮ್ಮ ಮಡದಿ ಎನು ಮಾಡುತ್ತಾಳೆ?”
“ ಆಕೆ ಎಮ್ಮಾ ಮಾರ್ಕೆಟ್‍ನಲ್ಲಿ ಬಟ್ಟೆ ವ್ಯಾಪಾರಿ.”
ಯೆಮ್ಮಾ ಮಾರುಕಟ್ಟೆಯಲ್ಲಿ 3000 ಮಹಿಳೆಯರು ವ್ಯಾಪಾರದಲ್ಲಿ ತೊಡಗಿದ್ದಾರೆ. ಈ ಮಾರುಕಟ್ಟೆಯಲ್ಲಿÉ ಪುರುಷರ ವ್ಯಾಪಾರಿಗಳಿಗೆ ಲೈಸನ್ಸ್ ನೀಡುವುದಿಲ್ಲ.
ಕೊನೆಯ ಎರಡು ದಿನಗಳಲ್ಲಿ ಈ ಡ್ರೈವರ್ ಮಗ ಬೊಬೊ ನಮ್ಮ ಗಾಡಿಯ ಸಾರಥ್ಯ ವಹಿಸಿದ.
ನಾನು ಕೇಳಿದೆ “ಬೋಬೋ ನೀನು ಯಾಕೆ ಯಾವ ಹುಡುಗಿಯನ್ನೂ ಇನ್ನೂ ಮೆಚ್ಚಿಲ್ಲ.”
“ಮನಸ್ಸಿಗೆ ಹಿತವಾಗುವ ಹುಡುಗಿ ಕಣ್ಣಿಗೆ ಬೀಳಲಿಲ್ಲ.” ಸರಕ್ಕನೆ ನುಡಿದ.
“ಇಷ್ಟೊಂದು ಸುಂದರಿಯರಾದ ಹುಡುಗಿಯರು ಇಲ್ಲಿ ಓಡಾಡುತ್ತಿದ್ದಾರೆ?” ಬೋಬೋ ಸುಮ್ಮನೆ ನಕ್ಕ.
“ವಿವಾಹ ಮೊದಲೇ ಒಂದು ವರ್ಷದವರೆಗೆ ಆ ಹುಡುಗಿಯ ಜೊತೆ ನೀನು ಇರಬಹುದು ಎಂದ ನಿನ್ನಪ್ಪ”
“ಹೌದು”
“Living together ವಿದೇಶಿ ಸಂಸ್ಕøತಿ ಎಂದು ನಾವು ಭಾವಿಸಿದ್ದೆವು” ಎಂದರು ನಮ್ಮೊಂದಿಗೆ ಇದ್ದ ಶಕುಂತಳಾರವರು.
“ ನೀವು ಭಾರತೀಯರು ವಿದೇಶಿ ಸಂಸ್ಕøತಿಯನ್ನು ಬೇಗ ಪರಿಚಯಿಸಿಕೊಳ್ಳುತ್ತೀರಿ. ಅವರ ಮೇಲೆ ಆಸಕ್ತಿ ಅಧಿಕ.  ಆದರೆ ನಮ್ಮ ಸಂಸ್ಕøತಿ ತಿಳಿದುಕೊಳ್ಳಲು ನಿಮಗೆ ಆಸಕ್ತಿ  ಇಲ್ಲ.”
ಬೋಬೋನ ಬೇಸರ ಕಂಡು ನಾನಂದೆ, “ ನೀವು ಕೂಡಾ ಭಾರತೀಯರಲ್ಲವೆ? ಇಡಿಯ ಭಾರತದಲ್ಲಿ ಒಂದೇ ಸಂಸ್ಕøತಿ ಇಂದು ನಾವು ಭಾವಿಸಿದ್ದೆವು.”
“ ನೀವು ಹಾಗೆ ಭಾವಿಸುವುದೇ ತಪ್ಪು. ನಾಗಾ ಜನರು ಅಷ್ಟು ವರ್ಷದಿಂದ ಹೋರಾಡುತ್ತಿರುವುದಕ್ಕೆ ಮೂಲ ಕಾರಣ  ಈ ಸಂಸ್ಕøತಿ. ನಮ್ಮ ಸಂವಿಧಾನ ವೇಧಾಧರಿತ ಸಮಾಜದ ಪದ್ಧತಿಗಳಿಗೆ ಅನುಗುಣವಾಗಿ ರಚನೆಯಾಗಿದೆ. ಈಶಾನ್ಯ ಭಾಗದ ಜನರು À ತಾವು ಭಾರತೀಯರಲ್ಲ ಎಂದು ಭಾವಿಸಲು ಇದೂ ಒಂದು ಕಾರಣ. ಮುಂಗೋಲಿಯನ್ ಬುಡಗಟ್ಟಿನ ನಾವೆಲ್ಲ ವೇದಾಧರಿತ ಸಮಾಜದವರಲ್ಲ. ನಮ್ಮಲ್ಲಿ ಇರುವ ವಿವಾಹ ಪದ್ಧತಿ, ಮಾತೃವಂಶೀಯ, ಮಾತೃ ಪ್ರಧಾನ ಪದ್ಧತಿ ಈ ಭಾಗದ ಹೆಚ್ಚಿನ ಎಲ್ಲಾ  ಬುಡಗಟ್ಟುಗಳಲ್ಲಿ ಇವೆ. ಧರ್ಮಬದಲಾದರೂ ಸಂಸ್ಕøತಿ ಬದಲಾಗಲಿಲ್ಲ.” ಎಂದ ಬೋಬೋ.

ವಿವಾಹ ಪೂರ್ವ ಸಹಜೀವನ, ಪೂರ್ವ ಪರಂಪರೆಯ ಪದ್ಧತಿಯಾಗಿ ಅರುಣಾಚಲ, ಸಿಕ್ಕ್‍ಂ, ನಾಗಲ್ಯಾಂಡ್, ಮಣಿಪುರ, ತ್ರಿಪುರ, ಶಿಲ್ಲಾಂಗ್ ಮಿಜೋರಾಂ, ಹಾಗೂ ಅಸ್ಸಾಂ... ಈ ರಾಜ್ಯಗಳ ಬಹುತೇಕ ಪಂಗಡಗಳಲ್ಲಿ ಮುಂದುವರಿದಿದೆ. ನಾಗಲ್ಯಾಂಡ್ ಮಿಜೋರಾಂನ ಪ್ರತಿಶತ 90 ಜನರು ಕ್ರೈಸ್ತರಾದರೂ ಅವರ ಸಂಸ್ಕøತಿ ಬುಡಗಟ್ಟು ಮೂಲದ್ದೇ ಮುಂದುವರಿದಿದೆ. ಬುಡಗಟ್ಟು ಮೂಲದ ಸಂಸ್ಕøತಿಯನ್ನು ಕ್ರೈಸ್ತರು ಹೆಚ್ಚಿನ ಮಟ್ಟಿಗೆ ಉಳಿಸಿಕೊಂಡಿರುವುದು ಅವರ ಸಂಸ್ಕøತಿ ಪ್ರೀತಿಗೆ ದೃಷ್ಟಾಂತ. ಕೆಲವರು ಚರ್ಚ್‍ನಲ್ಲಿ ವಿವಾಹ ಆದರೂ ಆದು ನಾಮಕಾವಸ್ಥೆಗೆ ಮಾತ್ರ. ಮತ್ತೆ ಪರಂಪರೆಯ ಪದ್ಧತಿಯಲ್ಲಿ ವಿವಾಹವನ್ನು ಮನೆಗಳಲ್ಲಿ ನಡೆಸುತ್ತಾರೆ. ಕೆಲವು ವೇಳೆ ಮನೆಯಲ್ಲಿ ನಡೆಯುವ ವಿವಾಹಕ್ಕೆ ಚರ್ಚ್‍ನ ಫಾದ್ರಿಗೆ ಆಮಂತ್ರಣ ನೀಡುತ್ತಾರೆ.

ಸಿಕ್ಕಿಂ ಬುಡಗಟ್ಟುಗಳಲ್ಲಿ ಪರಸ್ಪರ ಮೆಚ್ಚಿದ ಯುವಕ ಯುವತಿಯರು ಕಾಡಿಗೆ ಓಡಿದರಾಯಿತು. ಅಲ್ಲಿ ಒಂದು ರಾತ್ರಿ ಕಳೆದು ಮರಳಿ ಊರಿಗೆ ಬಂದ ಮೇಲೆ ಹಿರಿಯರು  ಅವರ ಮದುವೆ ಮಾಡುತ್ತಾರೆ. ವರನ ಸೋದರಮಾವನು ವಧುವಿನ ಸೋದರಮಾವನಲ್ಲಿ ಮದುವೆಯ ಪ್ರಸ್ತಾಪ ಒಡ್ಡಿ ಅವರ ಮದುವೆ ನಡೆಸುತ್ತಾನೆ. ಇಲ್ಲಿ ಬಲತ್ಕಾರದಿಂದ ಹುಡುಗಿಯನ್ನು ಅಪಹರಿಸುವ ಹಾಗಿಲ್ಲ. ಒಂದು ವೇಳೆ ಬಲತ್ಕಾರ ನಡೆದರೆ ಆ ಹುಡುಗನ ಮನೆಯವರಿಗೆ ಊರ ಪ್ರಮುಖರು ದಂಡ ವಿಧಿಸುತ್ತಾರೆ. ಆ ದಂಡವನ್ನು (ಎಮ್ಮೆ ಹಸು, ಭೂಮಿ ಇತ್ಯಾದಿ) ಹುಡುಗಿಯ ಮನೆಯವರಿಗೆ ನೀಡುತ್ತಾರೆ.
ಸಿಕ್ಕಿಂನಲ್ಲಿ ಮಕರ ಸಂಕ್ರಾತಿಯ ರಾತ್ರಿಯಲ್ಲಿ ನದಿ ಬಯಲಲ್ಲಿ ನಡೆಯುವ ಉತ್ಸವದಲ್ಲಿ ಹೆಚ್ಚಾಗಿ ಲೇಪ್ಚಾ ತರುಣ ತರುಣಿಯರು ಪಾಲ್ಗೊಳ್ಳುವ ಪದ್ಧತಿ ಇದೆ. ಈ ಉತ್ಸವ ಸಂದರ್ಭದಲ್ಲಿ ಪರಸ್ಪರ ಮೆಚ್ಚಿದ ತರುಣ ತರುಣಿಯರು ಉತ್ಸವದ ಸ್ಥಳದಿಂದಲೇ ನೇರವಾಗಿ ಕಾಡಿಗೆ ಓಡಿ ಅಲ್ಲಿ ಪ್ರಥಮ ರಾತ್ರಿ ಕಳೆದು ಮರಳುತ್ತಾರೆ. ಮನೆಗೆ ಮರಳಿದ ಈ ಜೋಡಿಗಳ ವಿವಾಹ ಪ್ರಸ್ತಾಪವನ್ನು ವರನ ಸೋದರಮಾವನು ವಧುವಿನ ಸೋದರಮಾವನ ಮನೆಗೆ ಹೋಗಿ ನಿವೇದಿಸುತ್ತಾನೆ .
ನಾನು ಸಿಕ್ಕಿಂನಲ್ಲಿ ಮಾತನಾಡಿಸಿದ ಹುಡುಗರಲ್ಲಿ ಒಬ್ಬ ಗ್ಯಾಂಗ್ ಟಾಕ್ ನಗರವಾಸಿ. ಹೊಟೇಲ್‍ನಲ್ಲಿ ಸ್ವಾಗತಕಾರ. ನಗರವಾಸಿಯಾದ ಆತ ಹುಡುಗಿಯೊಂದಿಗೆ ಓಡಿದ್ದು ಕಾಡಿಗಲ್ಲ, ಗೆಳೆಯನ ಮನೆಗೆ. ನಗರಗಳಲ್ಲಿ ವಾಸಿಸುವವರು ಗೆಳೆಯರ ಮನೆಗೆ ಹೆಚ್ಚಾಗಿ ಹೋಗುತ್ತಾರಂತೆ.
ಮಿಜೋರಂನಲ್ಲಿ 100ಕ್ಕೆ 90ರಷ್ಟು ಕ್ರೈಸ್ತರಾದರೂ ಇಲ್ಲಿ ಓಡಿ ಹೋಗಿ ಮತ್ತೆ ವಿವಾಹ ಆಗುವ ಪದ್ಧತಿ ಕೆಲವು ಪಂಗಡಗಳಲ್ಲಿದ್ದರೆ. ಕೆಲವು ಪಂಗಡದಲ್ಲಿ ತರುಣಿಗೆ ಬಸಿರು ನಿಂತ ಮೇಲೆ ಬಸಿರು ಮಾಡಿದ ಪುರುಷನ ಮನೆಗೆ ಹೋಗಿ ವಾಸಿಸುತ್ತಾಳೆ. ಮುಂದೆÀ ಚರ್ಚ್‍ನಲ್ಲಿ ವಿವಾಹ ನಡೆಯುತ್ತದೆ. ಆಧುನಿಕ ದಿನಗಳಲ್ಲಿ ನ್ಯಾಯಾಲಯದಲ್ಲಿ ವಿವಾಹ ಆಗುವುದಿದ್ದರೂ ಹೆಣ್ಣು ಗಂಡು ಗೊತ್ತದ ಮೇಲೆ ಅವರು ವಿವಾಹಿತರಂತೆ ವಾಸಿಸಬಹುದು. ಈ ಸಹಜೀವನ ಪರಸ್ಪರರಲ್ಲಿ ಐಕ್ಯತೆ ಮೂಡಿಸಿಲ್ಲವದರೆ ಬೇರೆಯಾಗಬಹುದು.  ಇವರಲ್ಲಿ ಇನ್ನೊಂದು ವಿಶಿಷ್ಟ ಸಂಪ್ರದಾಯ ಇದೆ. ವಿವಾಹ ಆದ ಮೇಲೆ ಹೆಣ್ಣು ಗಂಡನ ಮನೆಗೆ ಬರುವಾಗ ಒಂದು ರಗ್ಗು ತರುವುದು ಕಡ್ಡಾಯ ಸಂಪ್ರದಾಯ. ಮುಂದೆ ಅವಳ ಗಂಡನ ಮರಣ ಸಂದರ್ಭದಲ್ಲಿ ಈ ರಗ್ಗಿನಲ್ಲಿ ಅವನ ಶವವನ್ನು ಸುತ್ತಿ  ಅಂತ್ಯ ಸಂಸ್ಕಾರ ಮಾಡಲಾಗುವುದು   ಒಂದು ವೇಳೆ ಆಕೆ ರಗ್ಗು ತಂದಿಲ್ಲವಾದರೆ ಆಕೆಗೆ ನೀಡುವ ಕನ್ಯಾ ಶುಲ್ಕವನ್ನು ಖಡಿತಗೊಳಿಸುತ್ತಾರೆ.
ಶಿಲ್ಲಾಂಗ್ ಭಾಗದ ಕಾಶಿಯಾ ಜೈಂಟಿಯಾಗಳಲ್ಲಿ ಮದುವೆಗೆ ಮುನ್ನಾ ಗಂಡ ಹೆಂಡಿರಂತೆ ಬಾಳುವುದು ಪದ್ಧತಿ. ಇಂತಹ ಸಹಬಾಲ್ವೆಯಿಂದ ಮದುವೆಯಾಗಬೇಕಾದ ಹುಡುಗಿಗೆ ತಾನು ಆಯ್ದ ಗಂಡು ಸಮಧಾನ ತಂದಿಲ್ಲವಾದರೆ ಅಥವಾ ಈತ ಮನೆಯ ದುಡಿಮೆಗೆ ಒಗ್ಗಿಸಿಕೊಳ್ಳುವಾತ ಅಲ್ಲವೆಂದು ಮನೆÀಯವರಿಗೆ ತೋರಿದರೆ ಆಗ ಆ ಗಂಡನ್ನು ನಿರಾಕರಿಸುವ ಪದ್ಧತಿ ಇದೆ. ಈ ಸಂದರ್ಭದಲ್ಲಿ ಅವರ ಮಗಳು ಮಗುವಿನ ತಾಯಿಯಾದರೂ ಆ ಮಗುವನ್ನು ಮನೆಯವರು ಸಾಕುತ್ತಾರೆ. ಇದು ಒಂದು ವರ್ಷದ ಅವಧಿ.
ತ್ರಿಪುರಾ ಬುಡಗಟ್ಟುಗಳಲ್ಲಿಯೂ ವಿವಾಹಪೂರ್ವ ಸಹಬಾಳ್ವೆ ರೂಢಿಯಲ್ಲಿ ಇದೆ.  ಇಲ್ಲಿ ಮನೆಯ ಮಗಳನ್ನು ವಿವಾಹ ಆಗಬೇಕಾದ ಹುಡುಗ  ತಾನು ಬಯಸಿದ ಹುಡುಗಿಯ ಜೊತೆ ಹುಡುಗಿಯ ಹೆತ್ತವರ ಮನೆಯಲ್ಲಿ ಒಂದು ವರ್ಷ ಜೀವಿಸಬೇಕು. ಆತ ಕೃಷಿಕೆಲಸಗಳಲ್ಲೂ ಪಳಗಬೇಕು. ಆತ ಸೋಮಾರಿಯಾದರೆ ಆತ ವರ ಪರೀಕ್ಷೆಯಲ್ಲಿ ಸೋತಂತೆ. ಆ ಮದುವೆಯನ್ನು ರದ್ದುಮಾಡುತ್ತಾರೆ. ಈ ಪದ್ಧತಿಯನ್ನು Marrisge by servitud   ಎಂದು ಕರೆಯುತ್ತಾರೆ. ಈ ಸಹಬಾಳ್ವೆಯಿಂದ ಮಗುವಾದರೆ ಆಕೆಯ ಮನೆಯವರೇ ಮಗುವನ್ನು ಸಾಕುತ್ತಾರೆ.
ಅಸ್ಸಾಂನ ಬೋಡೋ ಬುಡಕಟ್ಟಿನ ಒಂದು ಪಂಗಡವಾದ ಕಚಾರಿಯಲ್ಲಿಯೂ ಬಯಸಿದ ಹುಡುಗಿಯ ಜೊತೆ ಹುಡುಗಿಯ ಹೆತ್ತವರ ಮನೆಯಲ್ಲಿ ಒಂದು ವರ್ಷ ಜೀವಿಸಬೇಕು. ಆತ ಕೃಷಿ ಕೆಲಸಗಳಲ್ಲೂ ಪಳಗಬೇಕು. ಈ ವರ ಪರೀಕ್ಷೆ ಒಂದು ವರ್ಷಕ್ಕಿಂತ ಹೆಚ್ಚಿಗೆ ತೆಗೆದುಕೊಂಡು ಹೋಗುವುದೂ ಇದೆ. ಈ ಎಲ್ಲಾ ವಿಧದಿಂದ ಹುಡುಗಿ ಒಪ್ಪಿಗೆಯಾದರೆ ಹುಡುಗನ ಸೋದರ ಮಾವ ವಿವಾಹ ಪ್ರಸ್ತಾವ ತೆಗೆದುಕೊಂಡು ಹುಡುಗಿಯ ಸೋದರ ಮಾವನಲ್ಲಿಗೆ ಹೋಗುತ್ತಾನೆ.
ಇನ್ನೊಂದು ಪದ್ಧತಿಯೆಂದರೆ ಹುಡುಗಿ ಸ್ವತಃ ಹುಡುಗನ ಮನೆಗೆ ಹೋಗಿ ದಂಪತಿಗಳಂತೆ ವಾಸಿಸುವುದು. ಈ ಪದ್ಧತಿಯನ್ನು ``Khar Chani’   ಎಂದು ಕರೆಯುತ್ತಾರೆ.
ಕಾಡಿಗೆ ಹೆಣ್ಣಿನೊಡನೆ ಓಡಿ ಹೋಗಿ ಮರಳಿ ಬರುವ ಪದ್ಧತಿಯಲ್ಲಿ ಹುಡುಗಿಯನ್ನು ಬಲಾತ್ಕಾರವಾಗಿ ಎತ್ತಿಕೊಂಡು ಹೋಗುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದ್ದೇ ಆದರೆ ಆತನಿಗೆ ಮತ್ತು ಆತನ ಕುಟುಂಬಕ್ಕೆ ಆತನ ಬುಡಗಟ್ಟು ಮುಖ್ಯ ಬಹಿಷ್ಕಾರ ಅಥವಾ ದಂಡ ಹಾಕುತ್ತಾನೆ. ದಂಡದ ಹಣವನ್ನು ಹೆಣ್ಣಿನ ಮನೆಗೆ ಕೊಡುತ್ತಾರೆ.
ಅರುಣಾಚಲ ಭಾಗದ ಮೊನಪಾಗಳು ಮಹಾಯಾನ ಪಂಥದ ಬೌದ್ಧರು.
ಇಲ್ಲಿ ಬಹುಪತಿತ್ವ ಪದ್ಧತಿ ಇದೆ. ಬಹು ಪತ್ನಿತ್ವವೂ ಇದೆ. ಬಹು ಪತಿತ್ವದಲ್ಲಿ ವಿವಾಹ ಆಗುವುದು ಸಾಮಾನ್ಯವಾಗಿ ಅಣ್ಣ ತಮ್ಮಂದಿರನ್ನು. ಈ ವಿವಾಹದ ಹಿಂದಿನ ಉದ್ದೇಶದಲ್ಲಿ ಆಸ್ತಿ ಭಾಗವಾಗಬಾರದು ಎಂಬ ಆಶಯವೂ ಇದೆ.

ಆದರೆ ಬಹು ಪತ್ನಿತ್ವಕ್ಕೆ ಅಕ್ಕ ತಂಗಿಯರು ಆಗಬೇಕಿಲ್ಲ.

 ನಗರಗಳಲ್ಲಿ ವಾಸಿಸುವ ಬುಡಗಟ್ಟುಮೂಲದ ಜನರೂ ತಮ್ಮ ಪಾರಂಪರಿಕ ವಿವಾಹ ಪದ್ಧತಿಯನ್ನು ಮುಂದುವರಿಸುತ್ತಿದ್ದಾರೆ.  ಆಕರ್ಷಕ ಮೈಕಾಂತಿಯ ಗೌರವರ್ಣದ ಇವರು ನೋಡಲು ಸುಂದರ ವ್ಯಕ್ತಿತ್ವದವರು.

ಮನೆಯಿಂದ ಕಾಡಿಗೆ ಓಡಿ ಹೋಗಿ ಮದುವೆಯಾಗುವ ಪದ್ಧತಿ ಕರ್ನಾಟಕದ ಬಿಳಿ ಗಿರಿ ರಂಗನ ಬೆಟ್ಟದ ಸೋಲಿಗರಲ್ಲೂ ಇದೆ. ಇಲ್ಲಿ ಕಾಡಿನಿಂದ ಮರಳಿದ ಮೇಲೆ ದಂಪತಿಗಳು ಒಂದು ತಿಂಗಳು ನೆರೆಯ ಊರಲ್ಲಿ ವಾಸಿಸಬೇಕು. ದಕ್ಷಿಣ ಕನ್ನಡದ ಮಾಯಿಲರಲ್ಲೂ ಈ ಪದ್ಧತಿ ಇತ್ತು ಎಂಬ ಮಾಹಿತಿ ಬಂದಿದೆ. ಈಗಲೂ ಅಪರೂಪಕ್ಕೆ ಇದೆಯೆನ್ನುತ್ತಾರೆ. ಈ ಬಗ್ಗೆ ಅಧ್ಯಯನ ಆಗಬೇಕಾಗಿದೆ.
ಒಟ್ಟಿನಲ್ಲಿ ವಿವಾಹ ಪೂರ್ವ ಸಹಬಾಳ್ವೆ  ಭಾರತೀಯ ಸಂಸ್ಕøತಿಯ ವಿವಾಹ ಪದ್ಧತಿ ಎನ್ನುವುದನ್ನು ನಾವು ಗಮನಿಸಬೆಕಾದ ವಿಷಯ. ಬರೇ ಹೆಣ್ಣನ್ನು ಗಂಡಿನ ತೊತ್ತಾಗಿ, ಕಾಮದ ಬೊಂಬೆಯನ್ನಾಗಿ ಕಾಣುವ, ಪುರುಷ ಪ್ರಧಾನ ವೈದಿಕ ಸಂಸ್ಕøತಿಯನು  ಮಾತ್ರ ಭಾರತೀಯ ಸಂಸ್ಕøತಿ ಎನ್ನುವುದು ಸರಿ ಅಲ್ಲ.

No comments:

Post a Comment