Tuesday, January 20, 2015

ಬಂಟರು ಒಂದು ಸಮಾಜೋ ಸಾಂಸ್ಕøತಿಕ ಅಧ್ಯಯನ ಕೃತಿಯ ಬಗ್ಗೆ ವಿದ್ವಾಂಸರ ಅಭಿಪ್ರಾಯಗಳು:

1st edition

2nd edition

ಬಂಟರು ಒಂದು ಸಮಾಜೋ ಸಾಂಸ್ಕøತಿಕ ಅಧ್ಯಯನ ತುಳುನಾಡಿನ ಸಮಗ್ರ ಅಧ್ಯಯನವೂ ಹೌದು. ಇದು ಸಂಶೋಧಕರಿಗೆ ಕೈಗನ್ನಡಿ ಆಗುತ್ತದೆ. ಇದು ಬರೀ ಕರ್ಣಾಟಕದ ಸಂಶೋಧಕರಿಗೆ ಮಾತ್ರವಲ್ಲ ಎಲ್ಲಾ ಪ್ರದೇಶದ, ಎಲ್ಲಾ ಸಮಾಜ ಶಾಸ್ತ್ರಜ್ಞರಿಗೆ ಬೇರೆ ಬೇರೆ ಪದ್ಧತಿಯನ್ನು ಅಧ್ಯಯನ ಮಾಡುವವರಿಗೆ ಒಂದು ಕೈಗನ್ನಡಿ.
ಡಾ|| ಸೂರ್ಯನಾಥ ಕಾಮತ್. 19.6.2004.ಇಡೀ ಕರ್ನಾಟಕದ ಸಂಸ್ಕøತಿಯ ಅಧ್ಯಯನದಲ್ಲಿ ಈ ಗ್ರಂಥದ ಮಹತ್ವ ಬಹಳ ಮಹತ್ತರವಾದುದು. ಇತಿಹಾಸಕ್ಕೆ ಸಂದುಹೋದ ಸಂಸ್ಕøತಿಯ ಒಳಗೆ ಇರುವಂತಹ ಅನೇಕ ವೈರುಧ್ಯಗಳನ್ನು ಮತ್ತು ಅನೇಕ ಸೃಜನಶೀಲತೆಯ ಮತ್ತು ಅನೇಕ ಬಾರಿ ನಾವು ಯಾವುದೇ ವಿಶ್ವವಿದ್ಯಾಲಯ ಮಾಡಲಾಗಲಿಲ್ಲವಲ್ಲ ಎಂದು ನಾಚಿಕೆ ಪಟ್ಟ ಗ್ರಂಥ ಅದು. ಕರ್ನಾಟಕದ ಸಂಸ್ಕøತಿಯನ್ನು ಅಧ್ಯಯನ ಮಾಡುವವರು ಗೊತ್ತಿಲ್ಲದವರು, ಹೊರಗಿನವರು, ಈ ಗ್ರಂಥವನ್ನು ಓದಬೇಕು. ತಮ್ಮ ಸಂಸ್ಕøತಿಯೊಂದಿಗೆ ಹೋಲಿಸಬೇಕು. ಮತ್ತು ಕರ್ನಾಟಕದ ಏಕೀಕರಣ ದೃಷ್ಟಿಯಿಂದ ಈ ಗ್ರಂಥ ಬಹಳ ಮಹತ್ವಪೂರ್ಣವಾದುದು.
ಡಾ|| ವಿವೇಕ ರೈ ಉಪಕುಲಪತಿ ಹಂಪಿ ವಿಶ್ವವಿದ್ಯಾಲಯ. ವಿಚಾರ ಸಂಕಿರಣದಲ್ಲಿ  19.6.2004.ಶ್ರೀಮತಿ ಹೆಗ್ಗಡೆಯವರ ಈ ಕೃತಿಯಲ್ಲಿ ಬಂಟರ ಸಮಾಜದ ಬಗ್ಗೆ ರಂಜಕತೆ ಇಲ್ಲ. ನೈಜ ಚಿತ್ರಣವಿದೆ. ಸಂಪ್ರದಾಯಗಳ ಬಗ್ಗೆ ಬರಿಯ ದಾಖಲಾತಿ ಇರದೆ ಚರ್ಚಿಸಿರುವುದು ಇದರ ರಚನೆಯ ಪ್ರಮುಖ ಅಂಶ. ಅಳುಪ ಹೆಸರಿನ ನೆಲೆಯಿಂದ ಬಂಟರ ಇತಿಹಾಸವನ್ನು ಕ್ರಿ.ಶ. 450ರ ಕಾಲಕ್ಕೆ ಕೊಂಡು ಹೋಗುವ ಈ ಕೃತಿಯು ಸಮಕಾಲೀನ ದಾಖಲೆಗಳಾದ ಬಂಟರ ಸಮುದಾಯದ ನೆಲೆಗಳು ಮುಂತಾದ ವಿಷಯಗಳನ್ನು 14 ಅಧ್ಯಾಯಗಳಲ್ಲಿ ವಿವರಣಾತ್ಮಕವಾಗಿ ಒಳಗೊಂಡಿದೆ. ಜನಾಂಗೀಯ ಅಧ್ಯಯನ ಕೃತಿಯಲ್ಲಿ ಈ ಗ್ರಂಥವು ಬೃಹತ್ತು ಮತ್ತು ಮಹತ್ತು ಆಗಿದೆ. ಈ ಕೃತಿಯ ಇಂತಹುದೇ ಯಾವುದಾದರೂ ಸಮಾಜ ಅಧ್ಯಯನ ನಡೆಸುವವರಿಗೆ ಮಾರ್ಗದರ್ಶಿ ಕೃತಿಯಾಗ ಬಲ್ಲುದು.
ಡಾ|| ದೇವರ ಕೊಂಡಾ ರೆಡ್ಡಿ.
ಹಂಪಿ ವಿಶ್ವವಿದ್ಯಾಲಯದ ಶಾಸನ ತಜ್ಞ.

‘ನಿಮ್ಮ ಅಧ್ಯಯನ ವ್ಯಾಪ್ತಿ, ಸಾಧನೆ, ತಾಳ್ಮೆ, ಛಲ, ಇತ್ಯಾದಿಗಳನ್ನು ಕೊಂಡಾಡಲೇಬೇಕು. ಒಂದು ಸಂಸ್ಥೆ ಮಾಡಬಹುದಾದ ಕೆಲಸವನ್ನು ಒಬ್ಬರೇ ಯಶಸ್ವಿಯಾಗಿ ನಿರ್ವಹಿಸಿದ್ದೀರಿ. ನಾನು ನೋಡಿದ ಹಲವು ಪಿ.ಹೆಚ್.ಡಿ. ಸಂಪ್ರಬಂಧಗಳಿಗಿಂತ ಇದು ಮೇಲ್ಮಟ್ಟದಲ್ಲಿದೆ. ನೀವು ಮಾಡಿದ ಕ್ಷೇತ್ರ ಕಾರ್ಯ, ಸಂಗ್ರಹಿಸಿದ ಮಾಹಿತಿ ಅಪಾರ. ಸಾಮಾನ್ಯರಿಗೆ ಇಷ್ಟು ಪರಿಶ್ರಮ ಪಡಲು ಸಾಧ್ಯವಿಲ್ಲ. ಇಷ್ಟು ದೊಡ್ಡ ಕೆಲಸ ಮಾಡಿದ ತಮ್ಮನ್ನು ಅಭಿನಂದಿಸುವುದು ಅವಶ್ಯ’.
ಅಮೃತ ಸೋಮೇಶ್ವರ.

‘ಇಂದಿರಾ ಹೆಗ್ಗಡೆಯವರ ಊಧ್ರ್ವ ಕೃತಿಯೆಂದರೆ ‘ಬಂಟರು –ಒಂದು ಸಮಾಜೋ ಸಾಂಸ್ಕøತಿ ಅಧ್ಯಯನ, ಹಲವು ವರ್ಷಗಳ ದೀರ್ಘ ಸಂಚಾರ, ಸ್ತ್ರೀಯರಿಗೆ ಪ್ರವೇಶ ಇಲ್ಲದೆಡೆಗೂ ಅವರ ಭೇಟಿ. ಬಗೆಬಗೆಯ ಅನುಭವ ಆಧುನಿಕ ನಾಗರಿಕತೆಯ ಫಲವಾಗಿ ಅಳಿದು ಹೋಗುತ್ತಿರುವ ಸಂಸ್ಕøತಿಯೊಂದರ ಅಧಿಕೃತ ದಾಖಲೆ’

ಎಚ್ಚೆಸ್ಕೆ. ಹಿರಿಯ ಅಂಕಣಗಾರ ಸುಧಾ ವಾರಪತ್ರಿಕೆ. 19.9.2002.


ಸಾಂಸ್ಕøತಿಕ ಇತಿಹಾಸ ಅಧ್ಯಯನ ಮಾಡುವವರಿಗೆ ಈ ಕೃತಿ ಅಪೂರ್ವ ಆಕರ ಗ್ರಂಥವಾಗಿದೆ.
ಸುಧಾ ವಾರಪತ್ರಿಕೆ. ಜುಲೈ 2004.


‘ಇಂತಹ ವಿಸ್ಮತ ಅಧ್ಯಯನಗಳು ಕಾಲಾಂತರದಲ್ಲಿ ನಿಬ್ಬೆರಗಾಗುವಷ್ಟು ಮಾಹಿತಿ ನೀಡುವ ಆಕರ ಗ್ರಂಥಗಳಾಗುತ್ತವೆ’ ಎಂದು ಪ್ರಸ್ತಾವನೆಯಲ್ಲಿ ಡಾ| ಎಂ. ಚಿದಾನಂದ ಮೂರ್ತಿಯವರು ಹೇಳಿರುವುದು ಈ ಗ್ರಂಥದ ಮಹತ್ವವನ್ನು ಸೂಚಿಸುತ್ತದೆ.
ಪ್ರಜಾವಾಣಿ.


‘ಇಂದಿರಾ ಹೆಗ್ಗಡೆಯವರು ಬಂಟರು- ಒಂದು ಸಮಾಜೋ ಸಾಂಸ್ಕøತಿ ಅಧ್ಯಯನ ಕೃತಿಯ ಒಂದು ಜಾತೀಯ ಅಧ್ಯಯನ ಅಲ್ಲ. ಬದಲಾಗಿ ಇಡೀ ತುಳುನಾಡಿನ ಸಾಂಸ್ಕøತಿಕ ಅಧ್ಯಯನವಾಗಿದೆ. ಬಂಟರ ಸಂಸ್ಕøತಿಯ ನೆಲೆ ಬೆಲೆಯನ್ನು ಅಧ್ಯಯನ ಮಾಡಿರುವ ಈ ಕೃತಿಯು ಬಂಟರ ಇತಿಹಾಸದ ದಾಖಲೆ ಮಾತ್ರವಲ್ಲ ಸಾಂಸ್ಕøತಿಕ ಮತ್ತು ಸಾಮಾಜಿಕಾತ್ಮಕ ನೆಲೆ ಬೆಲೆಗಳ ದಾಖಲೆಯಾಗಿದೆ. ಬಂಟ ಸಮಾಜದ ಇತಿಹಾಸವನ್ನು ಹುಡುಕುವ ಕೆಲಸ ಇನ್ನಷ್ಟು ಆಗಬೇಕು. ಆ ಗ್ರಂಥ ಮತ್ತುಷ್ಟು ಶೋಧನೆಗೆ ಪ್ರೇರಣೆಯಾಗಲಿ’.

ಡಿ.ಕೆ. ಚೌಟ. ಪ್ರಧಾನ ಕಾರ್ಯದರ್ಶಿ
ಚಿತ್ರಕಲಾ ಪರಿಷತ್ತು ಬೆಂಗಳೂರು. ವಿಚಾರ ಸಂಕಿರಣದಲ್ಲಿ 29.6.2004

ಇಂದಿರಾ ಹೆಗ್ಗಡೆಯವರ ಈ ಕೃತಿ ಆಳವಾದ ಅಧ್ಯಯನವನ್ನು ಒಳಗೊಂಡ ಕೃತಿ. ಇಲ್ಲಿಯ ವಿಷಯ ವೈವಿಧ್ಯಗಳು ನಮಗೆ ಆಶ್ಚರ್ಯ ತಂದುವು. ಬಂಟರಲ್ಲಿ ಇರುವ ಸಂಪ್ರದಾಯ ಸಾಂಸ್ಕøತಿಕ ಭೇದಗಳು ವಿವಿಧತೆಯಲ್ಲಿ ಏಕತೆ ಮೂಡಿಸಿವೆ.
ಕೆ. ಜಯಪ್ರಕಾಶ ಹೆಗ್ಡೆ ಶಾಸಕರು ವಿಚಾರ ಸಂಕಿರಣದಲ್ಲಿ
29.6.2004.

ಸೃಜನ ಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀಮತಿ ಇಂದಿರಾರವರು ತೀರಾ ಕಷ್ಟದಾಯಕ ಕ್ಷೇತ್ರ ಕಾರ್ಯ ಮಾಡಿ ತಾವು ಕಲೆ ಹಾಕಿದ ಅಪೂರ್ವ ಮಾಹಿತಿಗಳಿಗೆ ಒಂದು ರೂಪು ಕೊಡು ಮೂಲಕ ಗಂಭೀರ ಸ್ವರೂಪದ ಸಂಶೋಧನ ಚಟುವಟಿಕೆಗಳಿಗೆ ತಮ್ಮನ್ನು ತೊಡಿಗಿಸಿಕೊಂಡಿದ್ದು ನನ್ನ ಪಾಲಿಗೆ ಆಶ್ಚರ್ಯ. ಇವರ ಕೃತಿ ಪಿ.ಎಚ್.ಡಿ. ಮಹಾಪ್ರಬಂಧ ಅಲ್ಲ. ಆದರೆ ಇತ್ತೀಚಿನ ಸಂಶೋಧನ ರಂಗದಲ್ಲಿನ ವಿದ್ವತ್ತಿನ ದಿವಾಳಿತನವನ್ನು ಕಂಡಾಗ, ಪಿ.ಎಚ್.ಡಿ. ಪದವಿಗಾಗಿ ಸಿದ್ಧಪಡಿಸಿರದ ಈ ಸಂಶೋಧನ ಸಂಪ್ರಬಂಧವನ್ನು ಓದಿದಾಗ ಸಹಜವಾಗಿ ಆದರಕ್ಕೆ ಒಳಗಾಗುತ್ತದೆ. ಏಕೆಂದರೆ ಇದರ ರಚನೆಯ ಹಿನ್ನೆಲೆಯಲ್ಲಿ ಯಾವ ಪದವಿಯ ವ್ಯಾಮೋಹವೂ ಇದ್ದಂತಿಲ್ಲ.

ಡಾ|| ವಿದ್ಯಾಶಂಕರ ಸ್ವಪ್ನಲೋಕ
ಅಕ್ಟೋಬರ್ 2004.

ಇಂದಿರಾ ಹೆಗ್ಗಡೆರಯವರು ಈ ಕೃತಿಯನ್ನು ಬರೆದು ಇಡೀ ಕನ್ನಡ ನಾಡಿಗೆ ಉಪಕಾರ ಮಾಡಿದ್ದಾರೆ. ತುಳುವರು ಹೆಣ್ಣನ್ನು ಕಾಣುವ ರೀತಿ ತುಳುವ ಸಂಸ್ಕøತಿಯಲ್ಲಿ ಕನ್ಯಾದಾನ ಮಾಡುವುದಿಲ್ಲ ಎಂಬ ಶ್ರೇಷ್ಠ ಚಿಂತನೆ-ಆಚರಣೆ ಗೌರವ ಮೂಡಿಸುವಂತಹದು.
ಡಾ|| ಎಲ್.ಎಸ್. ಶೇಷ ಗಿರಿರಾವ್
ಈ ಕೃತಿಯ ವಿಚಾರ ಸಂಕಿರಣದಲ್ಲಿ 19.6.2004.

ಲೇಖಕಿ ಇಂದಿರಾ ಹೆಗ್ಗಡೆಯವರ ಅಧ್ಯಯನವು ತುಳುನಾಡಿನ ಸಾಮಾಜಿಕ ಧಾರ್ಮಿಕ ಪದ್ಧತಿಯನ್ನು ಪರಿಚಯಿಸಿ ಕೊಟ್ಟಿದೆ. ಇದು ಸಮಾಜ ಶಾಸ್ತ್ರದ ಅಧ್ಯಯನಕಾರರಿಗೆ ಉತ್ತಮ ಕೈಪಿಡಿ ಆಗಿದೆ. ನಮ್ಮ ಸಮಾಜದ ವಸ್ತುನಿಷ್ಠ ಅಧ್ಯಯನವು ಕಷ್ಟ. ಆದರೆ ಲೇಖಕರು ಅದೇ ಜನಾಂಗಕ್ಕೆ ಸೇರಿದ್ದರು ಕೂಡಾ ಪೂರ್ವಾಗ್ರಹ ಪೀಡಿತರಾಗದೆ ವಿಷಯ ಮಂಡಿಸಿದ್ದಾರೆ. ಇಲ್ಲಿಯ ವಿಷಯವು ಕರ್ನಾಟಕ ಸಂಸ್ಕøತಿ ಇತಿಹಾಸದ ಬಗ್ಗೆ ಹೆಮ್ಮೆ ಮೂಡಿಸುತ್ತದೆ.

ಡಾ|| ಎಂ. ಮರುಳ ಸಿದ್ಧಯ್ಯ
ಈ ಕೃತಿಯ ವಿಚಾರ ಸಂಕಿರಣದಲ್ಲಿ 19.6.2004.

ಒಂದು ಜನಾಂಗವು ವರ್ತಮಾನದ ಹತ್ತು ಹಲವಾರು ಪ್ರಭಾವಗಳು ಬದುಕಿನ ಅನಿವಾರ್ಯತೆಗಳು, ಬೇರೆ, ಬೇರೆ ಪ್ರದೇಶಗಳಲ್ಲಿ ಚದುರಿ ನೆಲೆಸಿರುವ ಕಾರಣಗಳು, ಇವೆಲ್ಲವುಗಳಿಂದ ಮೂಲ ಸಂಸ್ಕøತಿಯ ಅನನ್ಯತೆಯನ್ನು ಕಳೆದುಕೊಳ್ಳುವ ಅಪಾಯವಿರುವ ಸಂದರ್ಭದಲ್ಲಿ ಇಂದಿರಾ ಅವರ ಬಂಟ ಸಮಾಜ ಸಾಮಾಜಿಕ ಅಧ್ಯಯನ ಕೃತಿ ಕನ್ನಡ ಸಂಸ್ಕøತಿ ಮತ್ತು ಜನಾಂಗೀಯ ಅಧ್ಯಯನಕ್ಕೆ ಮಹತ್ವದ ಕೊಡುಗೆಯಾಗಿದೆ.
ಡಾ|| ವಿಜಯಾ ಸುಬ್ಬರಾಜ್
ಉದಯವಾಣಿ 29.8.2994.

ಶ್ರೀಮತಿ ಇಂದಿರಾ ಹೆಗ್ಗಡೆ ಅವರು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿದ ಹೆಚ್ಚು ವಸ್ತು ನಿಷ್ಠ ಮತ್ತು ವಿಶ್ವಸನೀಯ ವಿಷಯಗಳು ಈ ಗ್ರಂಥದಲ್ಲಿ ಅಡಕಗೊಂಡಿದೆ. ಈ ನೆಲೆಯಿಂದ ಜನಾಂಗೀಯ ಅಧ್ಯಯನ ಮಾಡುವ ಸಂಶೋಧಕರ ಕ್ಷೇತ್ರದಲ್ಲಿ ಈ ಕೃತಿ ಆಕರ ಗ್ರಂಥವಾಗಿ ಒದಗುವುದು.
ಶ್ರೀ ಕೆ. ಶ್ರೀಕರಭಟ್ಟ ಕರ್ಮವೀರ 11.7.2004.

ಅಪಾರ ಪರಿಶ್ರಮದ ಫಲವಾಗಿ ಬಂದ ಇಂತಹ ಮೌಲಿಕ ಕೃತಿ ಪ್ರತಿ ಬಂಟರ ಮನೆಯಲ್ಲಿ ಇಡಬೇಕಾದ ಕೃತಿ. ಈ ಕೃತಿಯನ್ನು ಬಂಟರ ಸಂಘಗಳು ಪುನರ್ ಮುದ್ರಿಸಿ ಕಡಿಮೆ ಬೆಲೆಯಲ್ಲಿ ಎಲ್ಲ ಜನರಿಗೆ ತಲುಪುವಂತೆ ಮಾಡಬೇಕು.

ಶ್ರೀ ವಿ. ಟಿ. ರಾಜಶೇಖರ.
ಈ ಕೃತಿಯ ವಿಚಾರ ಸಂಕಿರಣದಲ್ಲಿ 29.6.2004.

ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಸಹಕಾರ ಮತ್ತು ಪ್ರೋತ್ಸಾಹದಿಂದ ತಮ್ಮ ಈ ಬೃಹತ್ ಗ್ರಂಥವನ್ನು ಪ್ರಕಟಿಸಲು ಅನುಕೂಲವಾಯಿತು. ತಮ್ಮ ಶ್ರಮ ಸಾಧನೆಯನ್ನು ಎಲ್ಲರೂ ಮುಖ್ಯವಾಗಿ ಬಂಟ ಸಮುದಾಯದವರು ಮೆಚ್ಚಬೇಕಾದ ವಿಷಯ. ಈ ಸಂದರ್ಭದಲ್ಲಿ ತಮ್ಮನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಕೆ. ಶ್ರೀನಿವಾಸ ಆಳ್ವ ಮಾಜಿ ಅಧ್ಯಕ್ಷರು
ಬೆಂಗಳೂರು ಬಂಟರ ಸಂಘ.

ಇಲ್ಲಿ ಬರುವ 14 ಅಧ್ಯಾಯಗಳ 550 ಪುಟಗಳಲ್ಲಿ ಬಂಟ ಸಮಾಜದ ಸಾಂಸ್ಕøತಿಕ ಅಧ್ಯಯನದೊಂದಿಗೆ ತುಳುವ ಸಮಾಜದ ಎಲ್ಲರ ಸೂಕ್ಷ್ಮ ಅಧ್ಯಯನವನ್ನೂ ಮಾಡಿ ಇವೆಲ್ಲದರ ಮಧ್ಯ ಒಂದು ಅವಿನಾಭಾವ ಸಂಬಂಧವನ್ನು ಲೇಖಕಿ ಕಂಡುಕೊಂಡಿದ್ದಾರೆ. ಅದು ಚಾರಿತ್ರಿಕ ಸತ್ಯವೂ ಹೌದು.

ಡಾ|| ಕರುಣಾಕರ ಶೆಟ್ಟಿ
ಕರ್ನಾಟಕ ಮಲ್ಲ 20.6.2004.

‘ಸಮಕಾಲೀನ ಸಮಾಜದ ದಾಖಲೀಕರಣಕ್ಕೆ ಕೈ ಹಾಕುವವರು ಮಾದರಿಯಾಗಿ ತೆಗೆದುಕೊಳ್ಳಬಹುದಾದ ಇಷ್ಟು ಒಳ್ಳೆಯ ಕೃತಿಯನ್ನು ನೀಡಿದುದಕ್ಕಾಗಿ ಇಂದಿರಾ ಹೆಗ್ಗಡೆಯವರನ್ನು ಅಭಿನಂದಿಸುತ್ತೇನೆ’. ಮಂಚೂಣಿಯ ಸಂಶೋಧಕರಾದ ಡಾ|| ಚಿದಾನಂದ ಮೂರ್ತಿಯವರಿಂದ ಬಂದ ಈ ಶ್ಲಾಘನೆ ಇಂದಿರಾ ಹೆಗ್ಗಡೆಯವರ ಶೋಧ ಕಾರ್ಯಕ್ಕೆ ಡಾಕ್ಟರೇಟ್ ಪದವಿಯ ಸರ್ಟಿಫಿಕೇಟನ್ನೇ ಪರೋಕ್ಷವಾಗಿ ನೀಡಿದಂತೆ ಗೌರವಯುತವಾದುದು.

ಸಂಪಾದಕೀಯ ರತ್ನಾಕರ ಶೆಟ್ಟಿ
ಬಂಟರವಾಣಿ

ವ್ಯಾಪಕವಾದ ಕ್ಷೇತ್ರಕಾರ್ಯ ಮಾಡುವ ಮೂಲಕ ಮಾಹಿತಿಯನ್ನು ಕಲೆಹಾಕಿ ಹಾಗೂ ಅಧ್ಯಯನಕ್ಕೆ ಬೇಕಾದ ಸೈದ್ಧಾಂತಿಕ ನೆಲೆಗಟ್ಟಿಗೆ, ಅಧ್ಯಯನದ ಶಿಸ್ತಿಗೆ ಪೂರಕವಾಗಿ ಅಪಾರವಾದ ಪರಮಾರ್ಶನ ಗ್ರಂಥಗಳನ್ನು ಆಭ್ಯಸಿಸಿದ ಇವರ ಶ್ರಮವನ್ನು ಮೆಚ್ಚಲೇಬೇಕು. ಕನ್ನಡ ಸಾರಸತ್ವ ಲೋಕಕ್ಕೆ ಸಮರ್ಪಿಸಿದ ಈ ಕೃತಿಯು ಬಂಟ ಸಮುದಾಯದ ಮನೆ-ಮನಗಳನ್ನು ಬೆಳಗಿಸುವ ದೀವಿಗೆಯಾಗಲಿ.
ಶ್ರೀನಾಥ ಗೌರವ ಸಂಪಾದಕ ಸಂಪರ್ಕ.

No comments:

Post a Comment