Thursday, November 6, 2014

ಆಸ್ಟ್ರೇಲಿಯಾ ರಸ್ತೆ ನಿಯಮಗಳು ಮತ್ತು ಪೋಲೀಸರು



Brisban  River Bridge 

Brisban River Bridge 


Under ground Bus stop at Brisben city 

ಆಸ್ಟ್ರೇಲಿಯಾ ಪೋಲೀಸರು, ಸರಕಾರ ರಚಿಸಿರುವ ಕಾನೂನುಗಳನ್ನು ಕರಾರುವಾಕ್ಕಾಗಿ ಪಾಲಿಸುವಂತೆ ಜನರಲ್ಲಿ ಎಚ್ಚರ ಉಂಟು ಮಾಡುತ್ತಾರೆ. ಹೀಗಾಗಿ ಅಲ್ಲಿ ವಾಹನ ಚಲಾವಣೆ ಮಾಡುವುದು ಅಮೆರಿಕಕ್ಕಿಂತಲೂ ಆರಾಮದಾಯಕ. ಇಲ್ಲಿ ಪೋಲೀಸರು ಬಹಳ ಗಂಭೀರವಾಗಿ ತಮ್ಮ ಕರ್ತವ್ಯವನ್ನು ಮಾಡುವುದರಿಂದ  ಆಸ್ಟ್ರೇಲಿಯಾ ದೇಶವನ್ನು ಪೋಲೀಸ್ ಕಂಟ್ರಿ ಎನ್ನುವುದೂ ಇದೆ. ಆಸ್ಟ್ರೇಲಿಯಾ ಪೋಲೀಸ್ ವ್ಯವಸ್ಥೆ, ಜನರಲ್ಲಿ ಜನಜಾಗೃತಿ ಮೂಡಿಸಲು ಆಯಾ ವಾರದ ಪೋಲೀಸ್ ಕಾರ್ಯಾಚರಣೆಗಳನ್ನು ಟೆಲಿವಿಷನ್‍ನಲ್ಲಿ ಪ್ರಸಾರ ಮಾಡುತ್ತದೆ. ಕಳ್ಳರನ್ನು ಹಿಡಿಯುವುದು, ಗಂಭೀರ ಅಪರಾಧಿಗೆ ಸ್ಥಳದಲ್ಲೇ ಕೈಕೋಳ ತೊಡಿಸುವುದು ಇತ್ಯಾದಿ ವಿಷಯಗಳನ್ನು ಸಿನಿಮಾ ನೋಡಿದಂತೆ ನೋಡಬಹುದು. ಕುಡಿದು ಚಾಲನೆ ಮಾಡುವವರ ವಾಹನ ತಡೆದು ಅವರಿಗೆ ದಂಡ ಹಾಕಿ, ಅವರ ಲೈಸನ್ಸ್ ಪಡೆದು ವಾಹನ ಚಲಾಯಿಸುವವರನ್ನು ಕಾರಿನಿಂದ ಇಳಿಸುತ್ತಾರೆ. ಕಾರು ಹಾಗೂ ಲೈಸನ್ಸ್‍ನ್ನು ಅಮಾನತಿನಲ್ಲಿಟ್ಟು ಮರುದಿನ ಪೋಲೀಸ್ ಸ್ಟೇಷನ್ ಬರಲು ತಿಳಿಸುತ್ತಾರೆ.


ಆಸ್ಟ್ರೇಲಿಯಾದ ಕ್ವೀನ್ಸ್‍ಲ್ಯಾಂಡ್‍ನ ರಸ್ತೆಗಳು ವಾಹನ ಚಾಲಕರಿಗೆ ವಾಹನ ಚಲಾಯಸಲು ಸ್ಪೂರ್ತಿ ನೀಡುತ್ತವೆ. ಹೆದ್ದಾರಿಗಳು ಮಾತ್ರವಲ್ಲ ನಗರದಿಂದ100-200 ಕಿಲೋಮೀಟರ್ ಒಳಭಾಗÀದಲ್ಲಿ ಇರುವ ವಾಸ ಪ್ರದೇಶಗಳಲ್ಲೂ ರಸ್ತೆಗಳು ವಿಶಾಲವಾಗಿದ್ದು ಸುಸ್ಥಿತಿಯಲ್ಲಿ ಇವೆ. ರಸ್ತೆ ಡಾಮರೀಕರಣವನ್ನು ರಾತ್ರಿ ಮಾತ್ರ ಕೈಗೆತ್ತಿಕೊಳ್ಳುತ್ತಾರೆ. ಆ ಸಮಯದಲ್ಲಿ ಪೋಲೀಸ್ ಪಡೆಗಳು ಕಾವಲಿರುತ್ತಾರೆ. ನಾವು ವಿಮಾನ ನಿಲ್ದಾಣಕ್ಕೆ ರಾತ್ರಿ 11.15ಗೆ ಹೋದಾಗ ರಸ್ತೆ ರಿಪೇರಿಯಲ್ಲಿ ಕಾವಲು ನಿಂತ ಪೋಲೀಸ್ ವಾಹನಗಳನ್ನು ಕಾಣುವ ಸಂದರ್ಭ ಒದಗಿತ್ತು.

ಅಂದವಾದ ಹೆದ್ದಾರಿಗಳು: ನೋಡಲೂ ಅಂದವಾಗಿ ಇರುವ ಇಲ್ಲಿಯ ಹೆದ್ದಾರಿಗಳು ಬಹಳ ಸುರಕ್ಷಿತÀ. ಪ್ರಧಾನ ಹೆದ್ದಾರಿಗಳು ಏಕಮುಖ ಸಂಚಾರದಲ್ಲಿ 3 ಅಥವಾ 4 ಸಾಲಲ್ಲಿ ಇವೆ. ಎರಡೂ ದಿಕ್ಕಿನ ರಸ್ತೆಗಳ ನಡುವೆ ವಿಶಾಲ ಭೂಮಿ ಇದೆ. ಅಥವಾ ಸಾಲಾಗಿ ನೆಟ್ಟ ಪೈನ್ ಮರಗಳ ಸುಂದರ ತೋಪು ಇದೆ. ಹೆಚ್ಚನ ಕಡೆ  ವಿರುದ್ಧ ದಿಕ್ಕಿನಿಂದ ಬರುವ ವಾಹನಗಳೂ ಕಾಣುವುದಿಲ್ಲ.

ಹೆದ್ದಾರಿಗಳಲ್ಲಿ ಯಾವುದೇ ಪ್ರಾಣಿ ಕಂಡು ಬರುವುದಿಲ್ಲ. ಹಸು, ಕುದುರೆ, ಕುರಿಗಳಂತಹ ಸಾಕು ಪ್ರಾಣಿಗಳಿಗೆ ವಿಶಾಲ ಪ್ರದೇಶದಲ್ಲಿ ಮರದ ಬೇಲಿಯನ್ನು ನಿರ್ಮಿಸಿ ಪ್ರಾಣಿಗಳ ಹೊರನುಗ್ಗುವಿಕೆಯನ್ನು ತಡೆಯಲಾಗಿದೆ.

ಪ್ರಾಣಿಪ್ರಿಯರ ಪ್ರಾಣಿಗಳು ಅವರವರ ಅಂಕೆಯಲ್ಲಿ ಇರುತ್ತವೆ. ವಸತಿ ಪ್ರದೇಶ ಉಳಿದು ಇತರೆ ಭಾಗದ ರಸ್ತೆÉ ಮತ್ತು ಹೆದ್ದಾರಿಗಳಲ್ಲಿ ನಡೆದಾಡುವ ಮಾನವರು ಕಾಣಲಾರರು. ಬರೇ ವಾಹನ ಚಾಲಕರಿಗೆ ಮಾತ್ರ ಹೆದ್ದಾರಿಗಳು. ಇಲ್ಲಿ ಹಳ್ಳಿಗಳ ಸಂಸ್ಕøತಿ ಇಲ್ಲವಾದುದರಿಂದ ಒಂದೆಡೆಯಿಂದ ಮತ್ತೊಂದೆಡೆ ನಡೆದು ಹೋಗುವ ಜನರನ್ನು ಕಾಣಲಾರಿರಿ.
ಇಲ್ಲಿ ಅಟೋ ರಿಕ್ಷಾ ಇಲ್ಲ. ದುಬಾರಿ ಮೋಟಾರ್ ಬೈಕ್ ಅಪರೂಪಕ್ಕೆ ಓಡುತ್ತದೆ. ಹೆದ್ದಾರಿಗಳಿಗೆ ಸ್ಕೂಟರ್ ಸವಾರರಾಗಲೀ  ಸೈಕಲ್ ಸವಾರರು ಆಗಲಿ ಇಳಿಯುವಂತಿಲ್ಲ.

ಗಂಟೆಗೆ 100ಕಿಲೋಮೀಟರ್‍ಗಿಂತ ಕಡಿಮೆ ಓಡುವಂತಹ ವಾಹನಗಳು ಹೆದ್ದಾರಿಗಳಲ್ಲಿ ಓಡಲು ಕಾನೂನಿನ ನಿರ್ಬಂಧ ಇದೆ. ಹೆಚ್ಚಿನ ರಸ್ತೆಗಳಲ್ಲಿ ಗಂಟೆಗೆ 80, 90, 100, 110 ಕಿಲೋಮೀಟರ್‍ನ ವೇಗ ಮಿತಿ ಇದೆ.  ವಿಕ್ಟೋರಿಯಾ ಮುಂತಾದ ಕಡೆಗೆ ಪ್ರಧಾನ ಹೆದ್ದಾರಿಗಳಲ್ಲಿ ಗಂಟೆಗೆ 130 ಕಿಲೋಮೀಟರ್‍ಗಳ ಗರಿಷ್ಟ ಮಿತಿಯಲ್ಲಿ ವಾಹನ ಚಲಾಯಿಸ ಬಹುದು. ಹೆದ್ದಾರಿಗಳಲ್ಲಿ ಸಂಚರಿಸುವವರ ಕನಿಷ್ಟ ವೇಗಕ್ಕೂ ಮಿತಿ ಇದೆ. ನಿಗದಿತ ಕನಿಷ್ಟ ವೇಗದಲ್ಲಿ ಗಾಡಿ ಚಲಾಯಿಸುವವರು ಲೇನ್ ಗಳ ನಿಯಮವನ್ನೂ ಪಾಲಿಸತಕ್ಕದ್ದು. ನಗರದ ಹೊರಭಾಗದ ಮುಖ್ಯ ರಸ್ತೆಗಳಲ್ಲಿ ಕೆಲವೆಡೆ ಕನಿಷ್ಟ 40 ಕಿಲೋಮೀಟರ್ ವೇಗ ಮಿತಿ ಇಟ್ಟಿದ್ದಾರೆ. ಬೃಹತ್ ಗಾತ್ರದ ಟ್ಯಾಂಕರ್ ಮಾದರಿಯ ವಾಹನಗಳಿಗೆ ಪೋಲೀಸ್ ಎಸ್ಕಾರ್ಟ್ ಇರುತ್ತದೆ. ಇಂತಹ ಎಸ್ಕಾರ್ಟ್ ಇಲ್ಲವಾದಲ್ಲಿ ಬೃಹತ್ ವಾಹನಗಳು ರಸ್ತೆಗೆ ಇಳಿಸುವಂತಿಲ್ಲ. ಪೋಲೀಸ್ ರಕ್ಷಣೆಯ ಖರ್ಚು ಸಂಬಂಧಪಟ್ಟವರು ಭರಿಸಬೇಕು. ಇವುಗಳು ಎಡಮೂಲೆಯ ಲೇನ್ ನಲ್ಲಿ ಚಲಿಸಬೇಕು.


Shared Zone : ವಾಸದ ಭಾಗದ ರಸ್ತೆಗಳಲ್ಲಿ ನಡೆಯುವವರು, ಸೈಕಲ್ ಸವಾರರು, ಮೋಟಾರು ಸೈಕಲ್ ಚಾಲಕರು ಕನಿಷ್ಟ 10 ಕಿಲೋಮೀಟರ್ ವೇಗದ ಮಿತಿಯಲ್ಲಿ ಇರಲು ಕಾನೂನಿನ ಬೆಂಬಲ ಇದೆ. ಈ ರಸ್ತೆಗಳನ್ನು Shಚಿಡಿeಜ Zoಟಿe ಎಂದು ಕರೆಯುತ್ತಾರೆ. ಇಂತಹ ಭಾಗಗಳಲ್ಲಿಯೂ ಸೈಕಲ್ ಸವಾರರ ಲೇನ್ ಪ್ರತ್ಯೇಕ ಇದೆ.


Stop signs : ನೇರ ರಸ್ತೆಗೆ ಸೇರುವಲ್ಲಿ ಅಥವಾ ವರ್ತುಲಗಳಲ್ಲಿ ಕೆಲವು ಕಡೆ “ನಿಲ್ಲು” ಎಂಬ ಸೂಚನಾ ಫಲಕಗಳು ಇರುತ್ತವೆ. ಅಂತಹ ರಸ್ತೆಗೆ ಸೇರುವಾಗ ಕಡ್ಡಾಯವಾಗಿ ಕ್ಷಣ ಹೊತ್ತು ನಿಲ್ಲಬೇಕು. ಮುಂದಿನ ರಸ್ತೆಯಲ್ಲಿ ವಾಹನದ ಓಡಾಟ ಇರದೇ ಇದ್ದರೂ ಗಾಡಿ ನಿಲ್ಲಿಸಿ ಮತ್ತೆ ಹೊರಡಬೇಕು.

Give way :: PÉ®ªÀÅ PÀqÉ ‘give way’  ’  ಸೂಚನಾ ಫಲಕಗಳಿರುತ್ತವೆ. “ನಿಲ್ಲು” ಎನ್ನುವ ಚಿಹ್ನೆಗಿಂತ ‘ದಾರಿ ನೀಡು’ ((‘give way’)  ’)  ಎಂಬ ಫಲಕ ಹೆಚ್ಚಿನ ಮಹತ್ವದ್ದಾಗಿದೆ. ನೀವು ಸೇರಲಿರುವ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೆ ಹೋಗಲು ಅವಕಾಶ ನೀಡಿ ಆ ಮೇಲೆ ಮುಂದೆ ಹೋಗಬೇಕು. ಸಮನಾಂತರ ರಸ್ತೆಯಿಂದ ಮುಖ್ಯ ರಸ್ತೆಗೆ ಸೇರುವವರು ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಆದ್ಯತೆ ನೀಡಬೇಕು.

ಎಲ್ಲಾ ರೀತಿಯ ವಾಹನ ಚಾಲಕರು ಎಲ್ಲಾ ವಲಯಗಳಲ್ಲಿ give way’   ನಿಯಮ ಪಾಲಿಸಬೇಕು. ಪಾದಾಚಾರಿಗಳನ್ನು ರಸ್ತೆ ದಾಟಲು ಬಿಡಬೇಕು. ನಗರಗಳಲ್ಲಿ ಪಾದಾಚಾರಿಗಳೂ ರಸ್ತೆ ದಾಟುವ ಜಾಗದಲ್ಲಿ ಕಂಬದ ಮೇಲೆ ಇರುವ ಗುಂಡಿ ಒತ್ತುವ ವ್ಯವಸ್ಥೆ ಇದೆ.  ಆ ಗುಂಡಿ ಒತ್ತಿದರೆ ವಾಹನ ಚಾಲಕರಿಗೆ ನಿಲ್ಲಲು ಸೂಚನೆ ಬರುತ್ತದೆ. ಆಗ ಪಾದಚಾರಿಗಳು ರಸ್ತೆ ದಾಟಬಹುದು. ವಸತಿ ಪ್ರದೇಶಗಳ ರಸ್ತೆಗಳಲ್ಲಿ ಮಾನವರು ರಸ್ತೆ ದಾಟುವುದಿದ್ದರೆ ವಾಹನ ಚಾಲಕರು ಅವರಿಗೆ ಮೊದಲು ಅನುವು ಮಾಡಿಕೊಡಬೇಕು. ಅಂಗವಿಕಲರಿಗೂ ಬೇರೆಯೇ ವ್ಯವಸ್ಥೆ ಇದೆ.

ನಾಲ್ಕು ರಸ್ತೆ ಕೂಡುವಲ್ಲಿ ನೀವು ಬಲಗಡೆ ತಿರುವು ಪಡೆಯಬೇಕಾದರೆ ಎದುರು ಬರುವ ವಾಹನಗಳಿಗೆ ಮೊದಲು ಅವಕಾಶ ನೀಡಬೇಕು. -ಹೀಗೆ ಅನೇಕ ನಿಯಮಗಳಿವೆ. ನಗರ ಭಾಗಗಳು ಉಳಿದು ಇತರೆಡೆ ಟ್ರಾಫಿಕ್ ಲೈಟ್ ಸಿಗ್ನಲ್ ಕೂಡಾ ಇರುವುದಿಲ್ಲ. ನಗರದ ಹೊರಭಾಗದ ವರ್ತುಲ/ಸರ್ಕಲ್‍ಗಳಲ್ಲಿ ಸಿಗ್ನಲ್ ಇಲ್ಲ. ಪೋಲೀಸರೂ ಇರುವುದಿಲ್ಲ.  ನಗರದೊಳಗೆ ಆಗಲೀ, ಹೊರಭಾಗಗಳಲ್ಲಾಗಲೀ ಸಿಗ್ನಲ್ ಬಳಿ ಪೋಲೀಸರು ಇರುವುದಿಲ್ಲ. ಆದರೂ ರಸ್ತೆ ನಿಯಮಗಳನ್ನು ತಾಳ್ಮೆ ತಪ್ಪದೆ. ಲೋಪ ಇಲ್ಲದೆ ಪಾಲಿಸುತ್ತಾರೆ. ಅಲ್ಲಲ್ಲಿ ಇರುವ ಸ್ಥಿರ ಕ್ಯಾಮರಾಗಳು ಚಾಲಕರನ್ನು ನೋಡುತ್ತವೆ.

ಒಂದು ಗಾಡಿಯ ಎಡಭಾಗದಿಂದ ನಾವು ವೇಗ ಮಿತಿಯನ್ನು ಹೆಚ್ಚಿಸಲು 3 ಕಾರಣಗಳಿರಬಹುದು.
1 ಏಕಮುಖ ಸಂಚಾರದಲ್ಲಿ ಎರಡು ಲೇನ್‍ಗಳಿರಬೇಕು.
2 ಬಲಗಡೆ ಸಂಚರಿಸುವ  ವಾಹನ ಬಲಭಾಗಕ್ಕೆ ಯು ತಿರುವು ಪಡೆಯುವು ಸೂಚನೆ ನೀಡುವಾಗ.
3 ನಿಮ್ಮ ಬಲಭಾಗದ ವಾಹನ ಒಂದೆಡೆ ನಿಂತಿದ್ದರೆ.
 ಈ ಅಡಚಣೆಗಳ ಹೊರತಾಗಿ ನೀಮ್ಮ  ವಾಹನದ ಎಡಗಡೆಯಿಂದ ವೇಗ ಹೆಚ್ಚಿಸಿ ಹೋದರೆ ಅಂಕ ಕಳೆದು ದಂಡ ವಿಧಿಸುತ್ತಾರೆ.

ಯಾವ ರಸ್ತೆಯಲ್ಲೂ ಹಂಪ್ ಇರುವುದಿಲ್ಲ. ಅಥವಾ ನಮ್ಮಲ್ಲಿರುವಂತೆ ಸ್ಪೀಡ್ ಬ್ರೇಕ್ ಅಳವಡಿಸುವುದಿಲ್ಲ. ಹಾಗೊಂದು ವೇಳೆ ಅಳವಡಿಸಿದರೆ ಅಪಘಾತಗಳನ್ನು ಅಹ್ವಾನಿಸಿದಂತೆ ಎನ್ನುತ್ತಾರೆ ಆಸ್ಟ್ರೇಲಿಯಾದ ಪ್ರಜೆಗಳು.

ರಸ್ತೆ ನಿಯಮಗಳನ್ನು ತರಬೇತಿ ಸಂದರ್ಭದಲ್ಲಿ ಕಲಿಯುತ್ತಾರೆ. ಡ್ರೈವಿಂಗ್ ಕಲಿತ ಮೇಲೆ ‘L’ ’ ಫಲಕ ಹಾಕಿ ವಾಹನ ಚಲಾಯಿಸಲು ಅನುಮತಿ ನೀಡುತ್ತಾರೆ. ‘‘L’ ಫಲಕ ಹಾಕಿ ವಾಹನ ಚಲಾಯಸಲು ಅಭ್ಯಾಸ ಆದ ಮೇಲೆ ‘P’ ಫಲಕ ಹಾಕಿ ಒಂದು ವರ್ಷ ಚಲಾಯಿಸಲು ಪರವಾನಗಿ ನೀಡುತ್ತಾರೆ. ಅದರಲ್ಲಿ ಪಾಸಾದರೆ ಮತ್ತೆ ವಾಹನ ಚಾಲನಾ ಪರವಾನಿಗೆ ನೀಡುತ್ತಾರೆ.  ವಾಹನ ಚಾಲನಾ ಪರವಾನಗಿ ಪಡೆಯಲು ಕನಿಷ್ಟ ವಯಸ್ಸು 15 ವರ್ಷ 9 ತಿಂಗಳು.  ಇಲ್ಲಿಯ ರಸ್ತೆಗಳು ಚೆನ್ನಾಗಿ ಇದ್ದು ಎಲ್ಲ ಸವಾರರು ರಸ್ತೆ ನಿಯಮಗಳನ್ನು ಕರಾರುವಾಕ್ಕಾಗಿ ಪಾಲಿಸುವುದರಿಂದ ನಗರದ ಹೊರವಲಯದಲ್ಲಿ ವಾಸವಾಗಿರುವ ಜನರು ಹಾಲು ತರಲೂ 15 ಕಿಲೋಮೀಟರ್ ದೂರ ಗಾಡಿ ಓಡಿಸಿ ತರುತ್ತಾರೆ.

ವಾಹನ ಚಾಲಕರಿಗೆ ನೀಡಲಾಗುವ ಅಂಕಗಳು:
ಆಸ್ಟ್ರೇಲಿಯಾದಲ್ಲಿ ವಾಹನ ಚಾಲಕರಿಗೆ ಅಂಕಗಳನ್ನು ನೀಡುತ್ತಾರೆ. ವರ್ಷಕ್ಕೆ 12 ((Point)  ಅಂಕಗಳು. ಈ ಅಂಕಗಳು ನೀರಿನಲ್ಲಿ ಚಲಾಯಿಸುವ ಮೋಟಾರ್ ಬೋಟುಗೂ ಸೇರುತ್ತದೆ. ಪ್ರತಿಬಾರಿ ವಾಹನ ಚಲಾವಣೆಯಲ್ಲಿ ತಪ್ಪಾದರೆ ನಿಗದಿತ ಅಂಕ ಕಳೆಯಲಾಗುತ್ತದೆ. ಜೊತೆಗೆ ನಿಗದಿತ ಡಾಲರ್ ದಂಡ ಹಾಕುತ್ತಾರೆ. ಈ ತಪ್ಪುಗಳಲ್ಲಿ ಕುಡಿದು ವಾಹನ ಚಲಾಯಿಸುವುದು ಸೇರುತ್ತದೆ. ಪ್ರತಿ ತಪ್ಪುಗಳಿಗೂ ಅಂಕಗಳನ್ನು ಕಳೆಯುತ್ತಾ ಆ ವರ್ಷದ ಅಂಕ ಮುಗಿದರೆ ಮತ್ತೆ ದಂಡದ ಜೊತೆ ಪರವಾನಗಿ ರದ್ದು ಮಾಡುತ್ತಾರೆ. ಮತ್ತೆ ಮುಂದಿನ ವರ್ಷ/ಅವಧಿಯವರೆಗೆ ಆತ ರಸ್ತೆಯಲ್ಲಿ ವಾಹನ ಚಲಾಯಿಸುವಂತಿಲ್ಲ. ಒಂದು ವೇಳೆ ಚಲಾಯಿಸಿದರೆ ಆತನನ್ನು ಕೂಡಲೇ ಬಂಧಿಸಿ ಜೈಲಿಗೆ ತಳ್ಳುತ್ತಾರೆ. ಮತ್ತೆ ಮರು ವರ್ಷ ಆತನಿಗೆ 12 ಅಂಕಗಳೊಂದಿಗೆ  ಲೈಸನ್ಸ್ ಮರಳಿ ದೊರಕುತ್ತದೆ. ದುಬಾರಿ ಆಸ್ಟ್ರೇಲಿಯಾದಲ್ಲಿ ಸ್ವಂತ ವಾಹನ ಇಲ್ಲದೆ ಜೀವಿಸಲು ಸಾಧ್ಯ ಇಲ್ಲ. ಯಾರು ಯಾವತ್ತೂ ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ ನೇರವಾಗಿ ಜೈಲಿಗೆ ತಳ್ಳುತ್ತಾರೆ.

ನಾವಿದ್ದ ಕ್ವೀನ್ಸ್ ಲ್ಯಾಂಡ್‍ನ ದಂಡದ ಸದ್ಯದ ವೇಗ ಮಿತಿಯ ಪ್ರಮಾಣಗಳು:

ಆಯಾ ರಸ್ತೆಯಲ್ಲಿ ನಿಗದಿತ ವೇಗ ಗಂಟೆಗೆ 100ಆಗಿದ್ದರೆ 100ಕ್ಕಿಂತ ಮೇಲೆ 113ಕ್ಕಿಂತ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದಲ್ಲಿ 146 ಆಸ್ಟ್ರೇಲಿಯನ್ ಡಾಲರ್ ದಂಡ. ಮತ್ತು 1 ಪಾಯಿಂಟ್ ಕಳೆಯಲಾಗುತ್ತದೆ. ($1=58ರೂ.)
ಅದೇ ರಸ್ತೆಯಲ್ಲಿ :
ಗಂಟೆಗೆ 120ರವರೆಗೆ ಚಲಾಯಿಸಿದರೆ 220 ಡಾಲರ್ + 1 ಪಾಯಿಂಟ್
ಗಂಟೆಗೆ 130ರವರೆಗೆ ಚಲಾಯಿಸಿದರೆ 336 ಡಾಲರ್ + 4 ಪಾಯಿಂಟ್
ಗಂಟೆಗೆ 140ರವರೆಗೆ ಚಲಾಯಿಸಿದರೆ 513 ಡಾಲರ್ + 6 ಪಾಯಿಂಟ್
ಗಂಟೆಗೆ 140ಕ್ಕಿಂತ ಮೇಲ್ಪಟ್ಟು ಚಲಾಯಸಿದರೆ 1026 ಡಾಲರ್ ದಂಡ ಮತ್ತು 8 ಪಾಯಿಂಟ್.
ಈ ರೀತಿಯ ಪ್ರಮಾಣದಲ್ಲಿ ಆತನ್ನಲ್ಲಿದ್ದ 12 ಅಂಕಗಳನ್ನು ಆತ ಕಳಕೊಂಡರೆ ಆತನ ಪರವಾನಗಿ ರದ್ದು ಮಾಡುತ್ತಾರೆ.

ಆಸ್ಟ್ರೇಲಿಯಾದ ಎಲ್ಲಾ ರಸ್ತೆಗಳಲ್ಲಿ ಹಳದಿ ಪಟ್ಟಿ (ಎಲ್ಲೋ ಲೈನ್) ಇರುತ್ತದೆ. ಎಲ್ಲೋ ಲೈನ್ ದಾಟಿದರೂ ದಂಡ ವಿಧಿಸಿ ಪಾಯಿಂಟ್ ಕಳೆಯುತ್ತಾರೆ. ಪಾರ್ಕಿಂಗ್ ನಿಷೇಧ ಸ್ಥಳಗಳಿಗೂ ಈ ಮಾನದಂಡ ಅನ್ವಯವಾಗುತ್ತದೆ.

ರಸ್ತೆಯಲ್ಲಿ ಲೇನ್ ತಪ್ಪಿಸಿ ಓಡಿಸಿದರೂ ದಂಡ ಹಾಕಿ ಅಂಕ ಕಳೆಯುತ್ತಾರೆ. ವಾಹನದ ವೇಗ ಮಿತಿಯನ್ನು ಕರಾರುವಾಕ್ಕಾಗಿ ಪಾಲಿಸಬೇಕು. ಒಂದು ಕಡೆಯ ಸೂಚನಾ ಫಲಕ ತೋರಿಸಿದ ವೇಗ ಮಿತಿಗೂ ಮುಂದಿನ ಸೂಚನಾ ಫಲಕದ ವೇಗ ಮಿತಿಗೂ ಮಧ್ಯೆ ಸವೆಸಿದÀ ದೂರವನ್ನು ಅಲ್ಲಿರುವ ಕ್ಯಾಮರಾ ಕಣ್ಣುಗಳು ಕರಾರುವಾಕ್ಕಾಗಿ ಲೆಕ್ಕ ಹಾಕಿ ಕಂಟ್ರೋಲ್ ರೂಂಗೆ ಕಳುಹಿಸುತ್ತವೆ. ಆ ಪ್ರಕಾರ ಎಲ್ಲಾದರೂ ವೇಗ ಮಿತಿ ನಿಯಮಕ್ಕಿಂತ ಹೆಚಿಗೆ ಆಗಿದ್ದರೆ ದಂಡ ಹಾಕಿ ಅಂಕ ಕಳೆಯುತ್ತಾರೆ. ದಂಡ ನೇರವಾಗಿ ವಾಹನದ ಒಡೆಯನ ಬ್ಯಾಂಕ್ ಖಾತೆಯಿಂದ ಹೋಗುತ್ತದೆ. ಟೋಲ್ ಸಂಗ್ರಹ ಕೂಡಾ ವಾಹನದ ಯಜಮಾನನ ಖಾತೆಯಿಂದ ನೇರವಾಗಿ ಹೋಗುತ್ತದೆ. ವಾಹನದ ಒಳಗೆ ಸೆನ್ಸರ್ ಅಳವಡಿಸುತ್ತಾರೆ. ವಾಹನ ಸೇತುವೆಯ ಮೇಲಿನಿಂದ ಹೋಗಲಿ, ಅಥವಾ ಸುರಂಗದ ಮೂಲಕ ಒಡಲಿ, ನಿಮ್ಮ ಕಾರಿನಲ್ಲಿ ಇರುವ ಸೆನ್ಸ್‍ರ್ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಸರಕಾರಕ್ಕೆ ಸಂದಾಯ ಮಾಡುತ್ತದೆ.

ಅಪರಾಧಿಗಳನ್ನು ಕೂಡಾ ಗೌರವಯುತವಾಗಿ ನಡೆಸುವ ಪೊಲೀಸರು:

ನಾವು ಕುಳಿತಿದ್ದ ನಮ್ಮ ಮಗನ ಮಿತ್ರ ಶೇನ್‍ನ ವಾಹನ ಚಲಾಯಿಸಿದಾಗ ಪೊಲೀಸ್ ತಡೆದು ನಿಲ್ಲಿಸಿದ. ಶೇನ್ ನ ಮುಖ ಬಿಳುಚಿತು. ಅವನಲ್ಲಿ ಕಳೆದು ಉಳಿದ ಪಾಯಿಂಟ್ ಬರೇ ಎರಡು. ಪಾಯಿಂಟ್ ಪರಿಷ್ಕøತಗೊಳ್ಳಲು ಇನ್ನೂ ಒಂದು ತಿಂಗಳು ಬಾಕಿ ಇದೆ.

ಶೇನ್ ಬಿಳುಚಿಕೊಂಡಿದ್ದರೆ ಪೋಲೀಸರು ಸಮಧಾನ ಮತ್ತು  ಸೌಜನ್ಯದಿಂದ “gooಜ moಡಿಟಿiಟಿg. ಊoತಿ ಚಿಡಿe ಥಿou ಜoiಟಿg?” ಎಂದಾಗ ನಮಗೆ ಭಾರತೀಯರಿಗೆ ಅಚ್ಚರಿ. ಕೈಯಲ್ಲಿ ಇರುವ ಮೊಬೈಲ್ ಸ್ಪೀಡ್ ಕ್ಯಾಮರಾವನ್ನು ತೋರಿಸಿದ.  ಅದರ ಪ್ರಕಾರ ಆತ ಗಂಟೆಗೆ 60 ಕಿಲೋಮೀಟರ್ ಓಡಿಸುವಲ್ಲಿ 72 ಕಿಲೋಮೀಟರ್ ಓಡಿಸಿದ್ದ. ಈ ಅಂತರವನ್ನು ಶೇನ್ ಒಪ್ಪಲು ತಯಾರಿಲ್ಲ. ಆದರೆ ಪೋಲೀಸರ ಕ್ಯಾಮರಾ ತೋರಿಸುತ್ತಿದೆ. ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಅವಕಾಶ ಇದೆ. ಇಲ್ಲಿಯ ನ್ಯಾಯವಾದಿಗಳು ಬಹಳ ದುಬಾರಿ. ಹೀಗಾಗಿ 350 ಡಾಲರ್ ದಂಡ ನೀಡಿದ ಶೇನ್. ಈ ಮೊದಲು ಆತನಿಗೆ 2 ಪಾಯಿಂಟ್ ಮಾತ್ರ ಉಳಿದಿರುವ ಎಚ್ಚರಿಕೆ ಚೀಟಿ ದೊರಕಿದ ಅನುಕಂಪದಿಂದಲೋ ಭಾರತೀಯರನ್ನು ಆ ಗಾಡಿಯಲ್ಲಿ ನೋಡಿದುದರಿಂದಲೀ ಆತನಲ್ಲಿ ಉಳಿದ 2 ಪಾಯಿಂಟ್ ಗ¼ಲ್ಲಿ ಒಂದು ಪಾಯಿಂಟ್ ಮಾತ್ರ ಕಳೆದು  350 ಡಾಲರ್ ದಂಡ ಹಾಕಿ ನಮ್ಮನ್ನು ಬಿಟ್ಟ. ಒಂದು ವೇಳೆ ಆತ 120 ಕಿಲೋಮೀಟರ್ ವೇಗ ಮಿತಿಯಲ್ಲಿ ಇದ್ದರೆ ಆತ 8 ಅಂಕಗಳನ್ನು ಕಳೆದುಕೊಳ್ಳುತ್ತಿದ್ದ.


ಸ್ಥಿರ ಕ್ಯಾಮರಾದಲ್ಲಿ ವೇಗಮಿತಿ ಮೀರಿದ ವಾಹನ ದಾಖಲಾದರೆ ಆಗ ಪೊಲೀಸರು ಈ ಮೇಲ್ ಮಾಡುತ್ತಾರೆ. ಅಥವಾ ಮನೆಗೆ ಬರುತ್ತಾರೆ. 28 ದಿನದ ಒಳಗೆ ಅದಕ್ಕೆ ಉತ್ತರಿಸಿ ದಂಡ ಕಟ್ಟಬೇಕು. ಅಥವಾ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ಇದೆ.

ಲೇನ್ ಮೀರಿ ಓಡಿಸಿದಾಗ:  ನೀವು ವಾಹನ ಚಲಾಯಿಸುವ ಲೇನ್‍ನಲ್ಲಿ ದ್ವಿಮುಖ ಸಂಚಾರ ಇದ್ದರೆ ಆಗ ಏಕ ಮುಖದವರು ದ್ವಿಮುಖದ ರಸ್ತೆಗೆ ಹೋದರೆ ಆಗ ಸುಮಾರು 350 ಡಾಲರ್ ವರೆಗೆ ದಂಡ ವಿಧಿಸಲಾಗುತ್ತೆ.

ಕುಡಿದು ವಾಹನ ಚಲಾಯಿಸಬಾರದು:
ರಸ್ತೆಯಲ್ಲಿ ಪೊಲೀಸರು ವಾಹನ ನಿಲ್ಲಿಸಿ ಕುಡಿತದ ಟೆಸ್ಟ್ ಮಾಡುವಾಗ ಗರಿಷ್ಟ 0.48 ತೋರಿಸಿದರೆ ಎಚ್ಚರಿಕೆ ನೀಡಿ ಕಳುಹಿಸುತ್ತಾರೆ. ಅದಕ್ಕಿಂತ ಹೆಚ್ಚಾದರೆ ಕಾರಿನಿಂದ ಇಳಿಸಿ ಪರವಾನಗಿ ಪಡೆದು ದಂಡ ಹಾಕಿ ಅಂಕ ಕಳೆದು ಕಾರನ್ನು ಸ್ಟೇಷನ್‍ಗೆ ಎಳೆದೊಯ್ಯುತ್ತಾರೆ. ದಂಡ ಕಡಿಮೆಯೇನಲ್ಲ. ಕನಿಷ್ಠ ದಂಡ. $146 + 1ಅಂಕ ಕಳೆಯಲಾಗುತ್ತದೆ. ಗರಿಷ್ಟ 1026 ದಂಡ 8 ಪಾಯಿಂಟ್. -ಹೀಗೆ ದಂಡ ಮತ್ತು ಶಿಕ್ಷೆ ಎರಡೂ ಇಲ್ಲಿ ಇರುತ್ತದೆ.

 ಒಮ್ಮೆ ನನ್ನ ಮಗನ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ ದಂಪತಿಗಳಲ್ಲಿ ಒಬ್ಬ ಗಂಡ ತನ್ನ ಮಡದಿಗೆ ಕೇಳಿದ” “ಕುಡಿಯುವುದು ಯಾರು ನಾನೋ ನೀನೋ”  “ನಾನು” ಎಂದಳು ಆಕೆ. ಆತ ಕುಡಿಯಲಿಲ್ಲ.

ರಾತ್ರಿ ಕಂಠ ಪೂರ್ತಿ ಕುಡಿದವರು ಬೆಳಿಗ್ಗೆ ಗಾಡಿ ಚಲಾಯಿಸಲು ಪೊಲೀಸರಿಗೆ ಹೆದರುತ್ತಾರೆ. ಮುಂಜಾನೆಯಿಂದಲೇ ಪೋಲಿಸರು ಕುಡುಕರ ಬೇಟೆಗೆ ಇಳಿಯುತ್ತಾರೆ.

ವಾಹನ ನಿಲುಗಡೆ:
ನಗರಗಳಲ್ಲಿ ನಗರಪಾಲಿಕೆ ಹಾಗೂ ಹೊರಭಾಗದಲ್ಲಿ ಕೌನ್ಸಿಲ್‍ಗಳು ನಿಲುಗಡೆ ಶುಲ್ಕ ವಿಧಿಸುತ್ತಾರೆ. ನಗರದ ಶಾಪಿಂಗ್ ಮಾಲ್ ಉಳಿದು ಇತರೆಡೆ ಶಾಪಿಂಗ್ ಮಾಲ್‍ಗಳಲ್ಲಿ ಪಾರ್ಕಿಂಗ್ ಉಚಿತ.

ಕಛೇರಿ ಮುಗಿಯುವವರೆಗೆ ನಗರದೊಳಗೆ ರಸ್ತೆ ಬದಿ ಶುಲ್ಕ ತೆತ್ತು ಪಾರ್ಕ್ ಮಾಡಲು ಅವಕಾಶ ಇದೆ. ಶುಲ್ಕ ಪಾವತಿಸಲು ಅಲ್ಲಲ್ಲಿ ಎ.ಟಿ.ಎಮ್ ಮಾದರಿ ಕೌಂಟರ್ ಗಳಿವೆ.  ಆಗಲೂ ನಿಗದಿತ ಸಮಯಕ್ಕ ತಾವೇ ಕ್ರೆಡಿಟ್ ಕಾರ್ಡ್ ತೆತ್ತು ರಸೀದಿ ಪಡೆಯಬೇಕು. ಆ ರಶೀದಿಯನ್ನು ಕಾರಿನಲ್ಲಿ ಅಂಟಿಸಬೇಕು. ರಶೀದಿಯಲ್ಲಿ ನಮೂದಿಸಿದ ಸಮಯಕ್ಕಿಂತ ಹೆಚ್ಚು ಹೊತ್ತು ವಾಹನ ನಿಲ್ಲಿಸಿದರೆ ಎಳೆದೊಯ್ಯುತ್ತಾರೆ ಪೋಲೀಸರು. ಪಾರ್ಕಿಂಗ್ ಇಲ್ಲದ ಜಾಗದಲ್ಲಿ ಪಾರ್ಕಿಂಗ್ ಮಾಡಿದರೆ ಕನಿಷ್ಟ 55 ಡಾಲರ್ ಗರಿಷ್ಟ 200ಡಾಲರ್ ದಂಡ ವಿಧಿಸಿ ಅಂಕ ಕಳೆಯುತ್ತಾರೆ. ಆಗಲೂ ಗಾಡಿಯನ್ನು ಎಳೆದೊಯ್ಯೊತ್ತಾರೆ.

ನಗರದ ಹೊರಭಾಗಗಳಲ್ಲಿ ಕೌನ್ಸಿಲ್‍ಗಳು ಈ ಕೆಲಸ ಮಾಡುತ್ತವೆ.

ವಾಹನ ನಿಲುಗಡೆ ಶುಲ್ಕ :
ಯಾವುದೇ ಸ್ಥಳಗಳಲ್ಲಿ ಇರುವ ಪಾರ್ಕಿಂಗ್ ಶುಲ್ಕ ಬಹಳ ದುಬಾರಿ. ವಿಮಾನ ನಿಲ್ದಾಣದಲ್ಲಂತೂ ಬಹಳ ದುಬಾರಿ. ಕನಿಷ್ಟ ಒಂದು ಗಂಟೆ ಲೆಕ್ಕ. ನಿಗದಿತ ಸಮಯಗಿಂತ 5 ನಿಮಿಷ ಹೆಚ್ಚಾದರೂ ದಂಡ ಇದೆ. ಅದರ ಮೊದಲು ನವೀಕರಿಸಲು ಅವಕಾಶ ಇದೆ. ಕರಾರುವಾಕ್ಕಾಗಿ ನಿಯಮಗಳನ್ನು ಪಾಲಿಸುತ್ತಾರೆ. ಬ್ರಿಸ್ಬೆನ್ ನಂತಹ ಮಹಾನಗರಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆಂದು ಖಾಸಗಿ ಬಹು ಮಹಡಿಗಳು ಕೂಡಾ ಇವೆ. ವಾಹನ ಒಳಗೆ ಹೋಗುವಾಗ ತಡೆ ಕೋಲು ಇರುತ್ತದೆ. ಪಕ್ಕದಲ್ಲಿ ಇರುವ ಗುಂಡಿ ಒತ್ತಿದರೆ ಗುಂಡಿ ತೆರೆದುಕೊಳ್ಳುತ್ತದೆ. ಅದಕ್ಕೆ ಕ್ರೆಡಿಟ್ ಕಾರ್ಡ್ ಹಾಕಿ vಮಗೆ ಬೇಕಾಗುವ ಸಮಯಕ್ಕೆ ಹಣ ತೆತ್ತು ರಸೀದಿ ಪಡೆದಾಗ ಗೇಟ್ ತೆರೆದುಕೊಳ್ಳುತ್ತದೆ. ಮಾನವ ರಹಿತ ಸ್ವಯಂಚಾಲಿತ ವ್ಯವಸ್ಥೆ. ಮರಳುವಾಗ ತಾವು ಪಡೆದ ರಶೀದಿಯನ್ನು ಎಲಕ್ಟ್ರಾನಿಕ್ ಡಬ್ಬಕ್ಕೆ ತೋರಿಸಿದರೆ ಗೇಟ್ ತೆರೆದುಕೊಳ್ಳುತ್ತದೆ. ಕಾರ್ಮಿಕರಿಲ್ಲದ ಈ ದೇಶದಲ್ಲಿ ಎಲ್ಲಾ ವಿಷಯಗಳಿಗೂ ಯಂತ್ರಗಳನ್ನು ಅವಲಂಬಿಸುತ್ತಾರೆ. ( ಈ ವ್ಯವಸ್ಥೆ ಎಲ್ಲಾ ಮುಂದುವರಿದ ದೇಶಗಳಲ್ಲಿ ಇದೆ.)

ಹೆದ್ದಾರಿಗಳಲ್ಲಿ ತುರ್ತು ನಿಲುಗಡೆ:

ಆಸ್ಟ್ರೇಲಿಯಾದ ಹೆದ್ದಾರಿಗಳ ಬದಿಯಲ್ಲಿ ವಾಹನ ನಿಲ್ಲಿಸುವಂತಿಲ್ಲ. ವೇಗವಾಗಿ ಸಂಚರಿಸುವ ವಾಹನಗಳು ಆಕಸ್ಮಿಕವಾಗಿ ತೊಂದರೆಗೆ ಒಳಗಾದರೆ  ನಿಲ್ಲಿಸಲು ಸುಮಾರು 3 ಕಿಲೋಮೀಟರ್ ಅಂತರದಲ್ಲಿ ತುರ್ತು ನಿಲುಗಡೆಯ ಸೂಚನಾ ಫಲಕ ಇದೆ. ತುರ್ತು ಕರೆ ಮಾಡಲು ದೂರವಾಣಿಗೆ ಸೂಚನಾ ಫಲಕಗಳೂ ಇಷ್ಟೇ ಅಂತರದಲ್ಲಿ ಇವೆ.

ಪೋಲೀಸರು ಇರುವುದು ಸಾರ್ವಜನಿಕರಿಗಾಗಿ ಹಿತ ಕಾಯಲು:

ನವಂಬರ್ 20-2013 ರ ಒಂದು ಅನುಭವ. ಬ್ರಿಸ್ಬೆನ್ ನಗರದಿಂದ 120 ಕಿಲೋಮೀಟರ್ ದೂರ ಇದ್ದ ಡೂನನ್‍ನಲ್ಲಿ ನನ್ನ ಮಗನ ಮನೆ. ಆ ದಿನ ನನ್ನನ್ನು ಪಕ್ಕದ ಆಸನದಲ್ಲಿ ಕೂರಿಸಿ ಮಗ ಶರತ್ ರಾತ್ರಿ 10ಗಂಟೆಗೆ ಬ್ರಿಸ್ಬೆನ್ ವಿಮಾನ ನಿಲ್ದಾಣಕ್ಕೆ ಹೊರಟ. ಅವನ ಅನುಭವದ ಲೆಕ್ಕಚಾರದಲ್ಲಿ ಒಂದುವರೆ ಗಂಟೆಯ ಒಳಗೆ ನಾವು ವಿಮಾನ ನಿಲ್ದಾಣ ತಲುಪುತ್ತೇವೆ. ನಾವು 40 ಕಿಲೋಮೀಟರ್ ದೂರ ತಲುಪಿದ್ದೆವು. ಹೆದ್ದಾರಿಯಲ್ಲಿ ನಮ್ಮ ವಾಹನ 110ಕಿಲೋಮೀಟರ್ ವೇಗ ಮಿತಿಯಲ್ಲಿ ಓಡುತ್ತಿತ್ತು.  ಅಷ್ಟರಲ್ಲಿ ನಮ್ಮ ಮಿಸ್ತುಬಿಶ್ ವಾಹನ ನಡುÀಗಲಾರಂಭಿಸಿತು. ಅವನ ಹಿಂದಿನಿಂದ ಬರುತ್ತಿದ್ದ ದೊಡ್ಡ ಸರುಕುವಾಹÀನ ಬಲಗಡೆ ಲೇನ್‍ಗೆ ಹೋಯಿತು. ಆಗ ಅಪಾಯದಿಂದ ಪಾರಾದೆ ಎಂದು ವೇಗ ತಗ್ಗಿದ ಗಾಡಿಯನ್ನು ಸ್ಥಿಮಿತಕ್ಕೆ ತರಲು ಪ್ರಯತ್ನಿಸಿದ. ಟಯರ್ ಪಂಚರ್ ಆದುದು, ಗಮನಕ್ಕೆ ಬಂದರೂ ಅಂತಹ ವೇಗದಲ್ಲಿ ಒಮ್ಮೆಲೆ ಗಾಡಿ ನಿಲ್ಲಿಸಿದರೆ ಆಪಾಯ. ವಾಹನ ಸ್ಥಿಮಿತಕ್ಕೆ ಬಂದ ಮೇಲೂ ವಾಹನ ನಿಲುಗಡೆ ಮಾಡಲು ಸೂಕ್ತ ಸ್ಥಳ ಇರಲಿಲ್ಲ ಸುಮಾರು ಒಂದು ಕಿಲೋಮೀಟರ್ ಹೋದರೂ ತುರ್ತು ನಿಲುಗಡೆಯ ಸೂಚನಾ ಫಲಕ ಕಾಣಲಿಲ್ಲ. ಟಯರ್ ಸುಟ್ಟ ವಾಸನೆ ಬರುತ್ತಿತ್ತು. ಗಾಡಿ ಮುಂದೆ ತೆವಳಲಾರೆ ಎನ್ನತೊಡಗಿತು.  ವಾಹನ ನಿಲ್ಲಿಸಿ ಕೆಳಗೆ ಇಳಿದರೆ ಹೆದ್ದಾರಿಯಲ್ಲಿ ಚಲಿಸುವ ವಾಹನಗಳ ಬುರ್ರ್ ಸದ್ದಿಗೆ ಮೈ ಜುಮ್ಮೆಂದಿತ್ತು. ಮತ್ತೆ ಗಾಡಿ ಹತ್ತಿ ಎಡಭಾಗದಲ್ಲಿ ಗಾಡಿಯನ್ನು ಎಚ್ಚರಿಕೆಯಿಂದ ಚಲಾಯಿಸುತ್ತಾ ಸ್ವಲ್ಪ ಮುಂದೆ ಹೋಗಿ ರಸ್ತೆ ಮೂರು ದಿಕ್ಕಿಗೆ ಹೋಗುವಲ್ಲಿ ಖಾಲಿ ಜಾಗ ನೋಡಿ ನಿಲ್ಲಿಸಿದ. ಟಯರ್ ಬದಲಿಸಲು ಶರತ್ ಆರಂಭಿಸಿ ನಟ್ ಕಳಚಲು ನನ್ನಲ್ಲಿ ಮೊಬೈಲ್ ಪೋನ್ ಬೆಳಕು ಬೀರಲು ಸೂಚಿಸಿದ. “ಅಮ್ಮಾ ಬೆಳಕನ್ನು ಹಾಗೆ ಬಿಡು ಹೀಗೆ ಬಿಡು” ಎಂದು ಮಗ ಒತ್ತಡದಿಂದ ಹೇಳುತ್ತಿದ್ದಾಗ ಒಬ್ಬ ಯುವತಿ ತನ್ನ ಗಾಡಿಯನ್ನು ನಮ್ಮ ಗಾಡಿಯ ಮುಂದೆ ನಿಲ್ಲಿಸಿ ನಮ್ಮ ಬಳಿ ಬಂದು “ ಗುಡ್ ಈವನಿಂಗ್ “ ಎಂದು ವಂದಿಸುತ್ತಾ “ವಾಹನ ತೆಗೆ. ಹೆದ್ದಾರಿಯಲ್ಲಿ ವಾಹನ ನಿಲುಗಡೆ ಮಾಡುವ ರಿಸ್ಕ್ ತೆಗೆದುಕೊಂಡಿದ್ದಿ?” ಎಂದು ನಯವಾಗಿ ಆಕ್ಷೇಪಿಸಿದಳು. ಶರತ್ ಅವಳತ್ತ ಗಮನ ನೀಡಲಿಲ್ಲ. ನಾನು ತಲೆಯೆತ್ತಿ ನೋಡಿದೆ. ಆಗ ಆಕೆ ನನ್ನತ್ತ ನೋಡಿ “ನಾನು ಪೋಲೀಸ್......ನಾನು ಪೋಲೀಸ್..” ಅಂದಳು. ಆಕೆ ಪೋಲೀಸರ ಸಮವಸ್ತ್ರದಲ್ಲಿ ಇರಲಿಲ್ಲ.  “ನೀನು ಇಲ್ಲಿ ವಾಹನ ನಿಲ್ಲಿಸಿದ್ದು ತಪ್ಪು. ಅದೂ ನಿಮ್ಮ ತಾಯಿಯ ಸಹಾಯ ಪಡೆದು ಟಯರ್ ಬದಲಾಯಿಸುತ್ತಿದ್ದಿಯಾ?” ಅಧಿಕಾರಯುತವಾಗಿ ಹೇಳಿದಳು. ಆಗ ಶರತ್ “ ನಾನೇನು  ಮಾಡಲಿ ಟಯರ್ ಪಂಚರ್ ಆಗಿ ವಾಹನ ಓಡುವ ಸ್ಥಿತಿಯಲ್ಲಿ ಇಲ್ಲ. ಸುಟ್ಟು ಹೋಗಿದೆ ಟಯರ್.” ಎನ್ನುತ್ತಾ ಅವಸರವಸರವಾಗಿ ತನ್ನ ಕೆಲಸ ಮುಗಿಸತೊಡಗಿದೆ. ಆಕೆ : “ನೀನು ಹೈವೇ ಪೆಟ್ರೋಲ್ ಫೋರ್ಸ್ ಕರೆಯಬೇಕಿತ್ತು. ಹಾಗೆ ಮಾಡದೆ ನಿನ್ನ ಅಮ್ಮನ ಸಹಾಯ ಪಡೆಯುತ್ತಿದ್ದಿ.” ಅವಳ ಧ್ವನಿಯಲ್ಲಿ ಅಧಿಕಾರದ ಛಾಪು ಇದ್ದರೂ ವಿನಯ ಇತ್ತು. ಹೈವೇ ಪೆಟ್ರೋಲ್ ಫೋರ್ಸ್ ಉಚಿತ ಸೇವೆ ಒದಗಿಸುತ್ತದೆ.
“ಹೈ ಪೆಟ್ರೋಲ್ ಫೋರ್ಸ್ ಕರೆದರೆ ತಡವಾಗುತ್ತದೆ. ಆಗ ಇಂಡಿಯಾದಿಂದ ಬರುವ ನನ್ನ ಬಡ ತಂದೆ (ಠಿooಡಿ ಜಚಿಜಥಿ) 11 ಗಂಟೆಗೆ ಬ್ರಿಸ್ಬೆನ್ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಕಾಣದೆ ಗಾಬರಿಯಾಗಬಹುದು. ಅವರಿಗೆ ನಮ್ಮ ತೊಂದರೆ ತಿಳಿಸಲು ಅವರ ದೂರವಾಣಿ ಇಲ್ಲಿ ನಿಶ್ಚಲವಾಗುತ್ತದೆ.” ಶರತ್ ಉತ್ತರಿಸಿದ. ಆ ಆತಂಕ ನಮ್ಮಿಬ್ಬರನ್ನೂ ಕಾಡುತ್ತಿತ್ತು.

ಇಂತಹ ಸಂದರ್ಭದಲ್ಲಿ ಸರಕಾರದ ಮತ್ತು ಖಾಸಗಿ ಸಂಸ್ಥೆಗಳು ಬಂದು ಕೆಟ್ಟ ವಾಹನಗಳನ್ನು ಸರಿಪಡಿಸುವ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಿವೆ. ಅದಕ್ಕೆ ಸದಸ್ಯರಾಗಬೇಕು. ಸಹಾಯ ಪಡೆದ ಮೇಲೂ ಸದಸ್ಯರಾಗಬಹುದು. ಆಗ ಉಚಿತ ಸೇವೆ ನೀಡುತ್ತಾರೆ. (ಹೀಗಾಗಿ ಆಸ್ಟ್ರೇಲಿಯಾ ದೇಶದಲ್ಲಿ ಮಧ್ಯರಾತ್ರಿಯಲ್ಲೂ ಒಂಟಿ ಮಹಿಳೆಯರು ವಾಹನ ಚಲಾಯಿಸುತ್ತಾರೆ.)

‘ವನ್ ಮಿನಿಟ್’ ಎನ್ನುತ್ತಾ ಶರತ್ ಟಯರ್ ಬದಲಿಸಿದ. ಬದಲಿ ಚಕ್ರದಲ್ಲೂ ಗಾಳಿ ಕಡಿಮೆ ಇದೆ ಎಂಬ ಆತಂಕ ತೋರಿಸಿದ. ಅದುವರೆಗೆ ಆಕೆ ಫೋನ್ ಒತ್ತ್ತುತ್ತಲೇ ಇದ್ದವಳು ಈಗ “ನಾನು ನಿಮ್ಮ ಗಾಡಿಯ ಎಸ್ಕಾರ್ಟ್ ಆಗಿ ನಿಮ್ಮ ಹಿಂದೆ ಬರುತ್ತೇನೆ. ಮುಂದೆ ಪೆಟ್ರೋಲ್ ಬಂಕ್ ಇದೆ. ಅಲ್ಲಿ ಟಯರ್‍ನ ಗಾಳಿಯನ್ನು ಪರಿಶೀಲಿಸೋಣ” ಎಂದು ಪೆಟ್ರೋಲ್ ಬಂಕ್‍ನ ದಾರಿ ತೋರಿಸಿ ತಾನು ಹಿಂದಿನಿಂದ ತನ್ನ ಕಾರ್ ಚಲಾಯಿಸಿದಳು. ಪೆಟ್ರೋಲ್ ಬಂಕಲ್ಲಿ ಇಳಿದು ಆಕೆಯೇ ಟಯರ್‍ಗೆ ಗಾಳಿ ಹಾಕಲು ಸಹಾಯ ಮಾಡಿ ಟಯರ್ ಸರಿ ಇದೆಯೇ ಎಂದು ಖುದ್ದು ಪರಿಶೀಲಿಸಿ ಗಾಡಿ ಓಡಿಸಲು ಸೂಕ್ತ ಎಂದು ಅನಿಸಿದಾಗ ನಮಗೆ ಬಾಯ್ ಹೇಳಿ ರಾತ್ರಿ ಪಾಳಿಯ ಕಛೇರಿ ಕೆಲಸಕ್ಕೆ ತೆರಳಿದಳು. ಭಾರತೀಯ ಪೊಲೀಸರ ದರ್ಪ ಕಂಡಿದ್ದ ನಾನು ಅಲ್ಲಿಯ ಪೋಲೀಸರ ಈ ರೀತಿಯ ಸೇವೆಯನ್ನು ನೋಡಿ ದಂಗು ಬಡಿದು ಹೋಗಿದ್ದೆ.

“ಸಾರ್ವಜನಿಕರ ಸೇವೆಗಾಗಿ ಪೊಲೀಸರು” ಎಂಬ ಅಂಶ ನನಗೆ ಇಲ್ಲಿ ತಿಳಿಯಿತು. ಆಕೆ ಕಚೇರಿಯಲ್ಲಿ ಇರುವ ಸ್ಟಾಫ್. ಆದರೂ ಅಗತ್ಯ ಬಿದ್ದಲ್ಲಿ ಸಾರ್ವಜನಿಕರಿಗೆ ಕರ್ತವ್ಯ ನಿರತ ಪೋಲೀಸರು ಮಾತ್ರವಲ್ಲ ಕಛೇರಿಯ ಒಳಗಿರುವ ಪೋಲೀಸರೂ ನೆರವಾಗುತ್ತಾರೆ ಎನ್ನುವುದು ಅನುಭವದ ಮಾತಾಯಿತು. ಅಮೆರಿಕಾಗೆ ಹೋಲಿಸಿದರೆ ಆಸ್ಟ್ರೇಲಿಯಾ ರಸ್ತೆಗಳು ಹೆಚ್ಚು ಸುಖಕರ. ಆಸ್ಟ್ರೇಲಿಯಾದಲ್ಲಿ ಜನಸಂಖ್ಯೆ ಕಡಿಮೆ ಎಂಬ ಕಾರಣ ಇಲ್ಲಿ ಬೇಕಿಲ್ಲ. ಕಡಿಮೆ ಜನಸಂಖ್ಯೆ ಕಡಿಮೆ ಇದೆ ಯೆಂದು ಪೋಲೀಸರ ಸಂಖ್ಯೆ ಕಡಿಮೆ ಇಲ್ಲ. ಅಧಿಕ ಇದೆ. ಪ್ರತಿ ಎರಡು ಕಿಲೋಮೀಟರ್‍ಗೆ ಒಬ್ಬ ಪೋಲೀಸರು ಕಾಣಬರುತ್ತಾರೆ. ಕಾನೂನು ಪ್ರಕಾರ ಪೋಲೀಸರು ಹಾಕುವ ದಂಡದ ಮೊತ್ತ ಅಧಿಕ. ದಂಡ ಕಟ್ಟಿದ ಮೇಲೂ ಪಾಯಿಂಟ್ ಕಳೆಯುವ ಕಾನೂನು ಇರುವುದರಿಂದ ಜನ ಹೆದರುತ್ತಾರೆ.  ಬೆಲ್ಟ್ ಹಾಕದಿರುವುದು, ಬೇಬೀ ಸೀಟಲ್ಲಿ ಬೇಬಿ ಇಲ್ಲದ ಅಮ್ಮನ ಮಡಿಲಲ್ಲಿ ಇರುವುದು-ಇವೆಲ್ಲವೂ ಪಾಯಿಂಟ್ ಕಳೆಯಲು ಮತ್ತು ದಂಡ ಹಾಕಲು ಲೆಕ್ಕಕ್ಕೆ ಬರುತ್ತದೆ.

ಅಮೆರಿಕದ ವಾಹನ ಚಾಲಕರು ರಸ್ತೆ ನಿಯಮಗಳನ್ನು ಮೀರುವುದನ್ನು ನಾನು ಹಲವು ಬಾರಿ ನೋಡಿದ್ದೇನೆ. ಒಂದು ಬಾರಿಯೂ ಕುಡಿದು ವಾಹನ ಚಲಾಯಿಸುವವರನ್ನು ಪರೀಕ್ಷಿಸುವ ಪೋಲೀಸರನ್ನು ನೋಡಲಿಲ್ಲ.

ನಮ್ಮಲ್ಲೂ ಸರಕಾರ ಇಂತಹ ವ್ಯವಸ್ಥೆ ಜಾರಿಗೆ ತಂದು ಅಧಿಕ ದಂಡ ವಸೂಲಿ ಮಾಡಿದರೆ ಜನರಲ್ಲಿ ಭಯ ಉಂಟಾಗುತ್ತದೆ. ಜೊತೆಗೆ ಸರಕಾರದ ಖಜಾನೆ ತುಂಬುತ್ತದೆ. ಅದಕ್ಕೆ ರಾಜಕಾರಿಣಿಗಳು ಬದ್ಧತೆಯನ್ನು ಪ್ರದರ್ಶ್ಶಿಸಬೇಕು. ಕಠಿಣ ಕಾನೂನು ಇರಬೇಕು. ಕರಾರುವಕ್ಕಾಗಿ ಆ ಕಾನೂನುಗಳು ಜಾರಿಯಾಗಬೇಕು.




Below the Brisbane river tunnel/

No comments:

Post a Comment