Monday, September 15, 2014

ಸಕಲ ಜೀವಗಳಿಗೆ ಜೀವ ನೀಡುವ ನೀರು....



ಮಾನವರು ಆಗಿನ್ನೂ ಹುಟ್ಟಿರಲಿಲ್ಲ. ಈ ಭೂಮಿಯಲ್ಲಿ ಆಗ ನೀರೇ ನೀರು ಇತ್ತು....ಆ ನೀರಿನಿಂದಲೇ ನಿಧಾನವಾಗಿ ಮನುಷ್ಯ ಹುಟ್ಟು ಪಡೆದ ... ಮನುಷ್ಯನಿಗೆ ಜನ್ಮ ನೀಡಿದ ನೀರಿಗೆ ಆಗ ಗೊತ್ತಾಗಲಿಲ್ಲ ..ಈ ಮನುಷ್ಯ, ತನ್ನ ಬಸಿರ ಕಂದ, ತನ್ನ ದಾರಿಗೂ  ತಡೆ ಒಡ್ಡುತ್ತಾನೆ ಎಂದು..ಗೊತ್ತಾದ ಕೂಡಲೇ ತನ್ನ ನಿಜದ ದರ್ಶನ ಮಾಡಿಸಿತು. ತನ್ನ ಮೂಲರೂಪಕ್ಕೆ ಮರಳಿತು........ಆಗ..ಅಲ್ಲ ಈಗ ಗೊತ್ತಾಗುತ್ತಿದೆ ಮನುಷ್ಯನಿಗೂ ..ನಾಗ ಬೀದಿ...ಅಂದರೆ ನೀರು ಹರಿಯುವ ದಾರಿಯಲ್ಲಿ ಮನೆ, ನಗರ ಕಟ್ಟಬಾರದು ಎಂದು....ಗೊತ್ತಾಗುವ ಹೊತ್ತಿಗೆ ಎಲ್ಲವೂ ಮುಳುಗಡೆಯಾಯಿತು....

ಕಾಶ್ನೀರ ಭೂಮಿಯೂ ಹೀಗೆ.... ಕಾಶ್ಮೀರದಲ್ಲಿ ಹೆಚ್ಚಾಗಿ ನಾಗನ ಹೆಸರಿನ ಸರೋವರಗಳಿವೆ. ಅನಂತನಾಗ್ , ನಾಗಿನಿ ಸರೋವರ....ಇತ್ಯಾದಿ . 2009ರಲ್ಲಿ (ಅಕ್ಟೋಬರ 31) ದಾಲ್ ಸರೋವರದ  ಬೋಟು ಮನೆಯಲ್ಲ್ಲಿ2 ರಾತ್ರಿ ಕಳೆದಿದ್ದೆವು. ಭೂಮಿ ಮೇಲೆ ನೀರು... ನೀರ ಮೇಲೆ ನಾವು .....ಎಂಬಂತೆ 


ದಾಲ್ ಸರೋವರದ ಮಧ್ಯೆ ಇರುವ 'ಚಾರ್ ಚಿನಾರ್:
"  ಖಬೂತರ್ ಖಾನ  ಪ್ರವಾಸಿಗರ ಆಕರ್ಷಣೆ..

ತೇಲುವ ತೋಟ ಅಂದರೆ ಇದು...ತಾವರೆ ಮತ್ತು ನೈದಿಲೆಗಳು ಅರಳಿದ ಮೇಲೆ ಅದರ ಗಡ್ಡೆ ದಂಟುಗಳು ಕೆಸರಿನೊಂದಿಗೆ ತೇಲುತ್ತಾ ನೀರಿನ ಮೇಲೆ ಮಣ್ಣಿನ ಪದರ ನಿರ್ಮಿಸುತ್ತದೆ. ಈ ಪದರಗಳು ಒಂದಕ್ಕೊಂಡು ಅಂಟಿ ತೋಟವಾಗಿ ತೇಲುತ್ತದೆ.  ಗೊಬ್ಬರದ ನೆರವಿಲ್ಲದ ಸೊಂಪಾದ ತರಕಾರಿ....ಫಸಲು ಈ ತೋಟದ ಮಡಿಲು ತುಂಬುತ್ತದೆ.

ಹೀಗೆ ಪ್ರವಾಸಕ್ಕೆ ಜತೆ ನೀಡಿದ ಗೆಳತಿ ಸುಯೋಜ ಮತ್ತು ಪ್ರವಾಸವನ್ನು ವ್ಯವಸ್ಥೆಗೊಳಿಸಿದ ಎಸ್ ಆರ್ ಹೆಗ್ಡೆ-ನಾಗಿನ ಸರೋವರದ ಮಹಾಜೋಂಗ್ ಹೆಸರಿನ ಬೋಟ್ ಹೌಸ್ ನಲ್ಲಿ  

No comments:

Post a Comment