Friday, July 18, 2014

ಪಲ್ಲ ಪೂಜೆ-food worship(?)



ತುಳುನಾಡಿನಲ್ಲಿ ಯಾವುದೇ ಆಚರಣೆ ಉಪಾಸನೆಯಲ್ಲಿ ಅನ್ನದಾನ ಬಹಳ ಮುಖ್ಯ. ಅದರಲ್ಲೂ ನಾಗ-ಬ್ರಹ್ಮ(ಬೆರ್ಮೆರ್)ಉಪಾಸನೆಯಲ್ಲಿ ಅನ್ನದಾನದಲ್ಲಿ ಲೋಪಪುಂಟಾದರೆ ಪೂಜೆಯ ಫಲ ಸಿದ್ಧಿಸುವುದಿಲ್ಲ. ಮಾತ್ರವಲ್ಲ ಅನ್ನದಾನ ನೆರೆದ ಜನಕ್ಕೆ ತೃಪ್ತಿಯಾಗಿಲ್ಲ ಆದರೆ ಅದರಿಂದ ಉಪಾಸನೆ ಆಯೋಜಿಸಿದವರಿಗೆ ಕೇಡುಂಟಾಗುವುದು ಎಂಬ ನಂಬಿಕೆ ಇದೆ.

ಬ್ರಹ್ಮಮಂಡಲ / ಆಶ್ಲೇಷಾ ಬಲಿ  ನಾಗಬೆರ್ಮರಿಗೆ. ಮೇಲಿನ ಫೋಟೋ ಬ್ರಹ್ಮ ಮಂಡಲದಲ್ಲಿ ಮಹಾ ಅನ್ನ ಸಂತರ್ಪಣೆಗೆ ಮಾಡಿದ ಅನ್ನದ ರಾಶಿ. (ಎಳತ್ತೂರು ಪಡ್ಡಲ್ಲ) ಅನ್ನ ಬೇಯಿಸಿ ಒಟ್ಟು ಹಾಕಿ " ಕರೆದು ಬಂದವರು ಕಡಿಮೆ. ಕರೆಯದೆ ಬಂದವರು ಹೆಚ್ಚು. ಒಬ್ಬರಿಗೆ ಇದೆ, ಮತ್ತೊಬ್ಬರಿಗೆ ಇಲ್ಲ ಎಂದಾಗದೆ ಬಂದವರೆಲ್ಲ ಉಂಡು ತೃಪ್ತಿ ಪಡುವಂತೆ ಅನುಗ್ರಹಿಸಬೇಕು " ಎಂದು ಅನ್ನದ ರಾಶಿಯ ಮುಂದೆ ಪಟ್ಟದ ಯಜಮಾನ ಮತ್ತು  ಮಾತೃ ವಂಶೀಯ ಹಿರಿ ತಾಯಿ ಅಥವಾ ದೈವಪಾತ್ರಿ ಕೈಮುಗಿಯುವ ಪದ್ಧತಿ ಮುಂದುವರಿದಿದೆ. ಈ ರೀತಿ ಅನ್ನ ರಾಶಿ ಹಾಕಿ ಪ್ರಾರ್ಥಿಸುವುದಕ್ಕೆ` ಪಲ್ಲ ಪೂಜೆ 'ಎನ್ನುತ್ತಾರೆ. ಮೇಲಿನ ಚಿತ್ರ ಬ್ರಹ್ಮ ಮಂಡಲದ ಪಲ್ಲ ಪೂಜೆಯದ್ದು. 

No comments:

Post a Comment