Tuesday, May 20, 2014

ಗೂಬೆ ಮನೆ ಹೊಕ್ಕ ಮೇಲೆ...

1986ರ  ಒಂದು ದಿನ. ಆಗ ನಾವು ಆ-ರ್.ಪಿ.ಸಿ. ಲೇ ಔಟ್ ನ ಬಾಡಿಗೆ ಮನೆಯಲ್ಲಿ ಇದ್ದೆವು. ಮೂರನೆಯ ತರಗತಿಯ ಮಗ ಶರತ್, 6ನೆಯ ತರಗತಿ ಮಗಳು ಸರಿತಾ ನಮ್ಮ ಪುಟ್ಟ ಸಂಸಾರದ ಕನಸುಗಳು. 

ಒಂದು ಅಡುಗೆ ಮನೆ, ಮಲಗುವ ಕೋಣೆ ಮತ್ತು ಹಾಲ್ ಇದ್ದ ಮನೆ. ಒಂದು ದಿನ ಈ ಮನೆಯ ಒಳಗೆ ಗೂಬೆ (0wel/ನತ್ತಿಂಗೆ) ಹಾರಿ ಬಂತು. ಅಷ್ಟೂ ದಿನ ಮನೆಯ ಮುಂದಿನ ಮರದಲ್ಲಿ ಕುಳಿತು ರಾತ್ರಿ ಕೂಗುತ್ತಿದ್ದ ಗೂಬೆ ಮನೆಯ ಒಳಗಡೆ ಬಂದು ತನ್ನದೇ ವಾಸದ ನೆಲೆಯಂತೆ ಅಧಿಕಾರ ಸ್ಥಾಪಿಸಿತು.  ಮರಿಗೂಬೆ. ಅದರ ಕಣ್ಣುಗಳು ಪಿಳಿ ಪಿಳಿ ಅನ್ನುತ್ತಿದ್ದು ಮುಗ್ಧತೆಯಿಂದ ಕೂಡಿತ್ತು. ನಾನು ಓಡಿಸಲು ಪ್ರಯತ್ನ ಪಟ್ಟೆ. ಅದು ಹಾಲ್ ನಿಂದ ಬೆಡ್ ರೋಮಗೆ ಬೆಡ್ ರೂಮಿನಿಂದ ಹಾಲ್ ಗೆ ಹಾರಿ ಗೋಡೆಯ ಮೇಲೆ ಇರುವ ವೆಂಟಿಲೇಟರ್ ಮೇಲೆ ಕೂತು ಮಗುವಿನ ಆರ್ತತೆಯಿಂದ ನೋಡುತ್ತಿತ್ತು. ಕೊನೆಗೆ ನಾನೇ ಸೋತು ಹೋದೆ. ಅದ್ನು ಮರೆತ ನಾನು ಮತ್ತೆ ಯಾವಾಗಲೋ ನೋಡಿದಾಗ ಅದು ತನ್ನ ಪಾಡಿಗೆ ಮನೆ ತೊರೆದು ಹೋಗಿತ್ತು.
ಗೂಬೆ ಹೊಕ್ಕ ಮನೆ ತೊರೆಯ ಬೇಕು, ಮನೆಗೆ ಗೂಬೆ ಹೊಕ್ಕರೆ ಅಶುಭ ಎನ್ನುವುದನ್ನು ನಾನು ಬಾಲ್ಯದಿಂದಲೇ ಕೇಳಿದ್ದೆ. ಹೀಗಾಗಿ ಗೂಬೆಯ ನಮ್ಮ ಮನೆ ಪ್ರವೇಶ, ಶುಭವೋ ಅಶುಭವೋ ಎಂದು ನೋಡೋಣ ಎಂದು ಗೂಬೆ ಬಂದ ದಿನಾಂಕವನ್ನು ಡೈರಿಯಲ್ಲಿ ದಾಖಲಿಸಿದೆ. ಗಂಡನಿಗೂ ತಿಳಿಸಿದೆ. ಗೂಬೆ ಮನೆ ಹೊಕ್ಕ ದಿನಗಳಲ್ಲಿ ಹೆಗ್ಡೆಯವರು ಬಿ. ಎಚ್. ಎಲ್. ನಲ್ಲಿ ಸ್ಟೋರ್ ಕೀಪರ್ ಆಗಿದ್ದರು.
2014ರ ಮೇ 13ರಂದು ಸುರತ್ಕಲ್ ಮನೆಗೆ ಬಂದ ಶ್ರೀ ಹರ್ಷನೊಂದಿಗೆ ಕಡಲ ಮಡಿಲ ಅಲೆಗಳ ಮನ ತಣಿಸುವ ಕುಣಿತ ನೋಡಿ ಮರಳಿ ಬಂದು ಕುಳಿತಿದ್ದೆ. ಹೆಗ್ಗಡೆಯವರು ಹರ್ಷನಿಗೆ ಹೇಳಿದರು: ಇವಳಿಗೆ ಕಡಲು ಮಡಿಲ್ಲಲ್ಲಿ ಇರುತ್ತಾಳೆ. ಕಡಲು ಓಡಿ ಇವಳು ದಣಿಯುವುದೇ ಇಲ್ಲ.
ನನಗೆ ಕಡಲನ್ನು ಮನಸಲ್ಲಿ ತಂದರೂ ನೆಮ್ಮದಿ. ಈಗಲೂ ನೆಮ್ಮದಿಯೆನಿಸಿತು.  ಒಮ್ಮಲೆ ಅಂದು 1996ರಲ್ಲಿ ಮನೆಗೆ ಬಂದ ಅತಿಥಿ ಗೂಬೆಯ ನೆನಪಾಯಿತು. ಅದರ ಕಣ್ಣುಗಳು ಮಿನುಗತೊಡಗಿದುವು. ಗೂಬೆ ಮನೆ ಹೊಕ್ಕ ಇಷ್ಟು ವರ್ಷಗಳಲ್ಲಿ   ನಮ್ಮ ಕುಟುಂಬದಲ್ಲಿ ಆದ ಏರು ಪೇರುಗಳಾವುವು?
ಹೆಗ್ಡೆಯವರು ಬಿ.ಎಚ್. ಎಲ್. ತೊರೆದು ಅಧಿಕಾರಿಯಾಗಿ ಡೆಕ್ಕನ್ ಹೆರಾಲ್ಡ್ ಸೆರಿದರು.
ನಾನು ಅನಿರೀಕ್ಷಿತವಾಗಿ ವ್ಯಾಪಾರ ಕ್ಷೇತ್ರಕ್ಕೆ ನುಗ್ಗಿದೆ. ಆರ್ಥಿಕವಾಗಿ ಸ್ವಲ್ಪ ಸುಧಾರಣೆಯಾದಾಗ ಎರಡು ಮಲಗುವ ಕೋಣೆಗಳ ಬಾಡಿಗೆ ಮನೆ ಮಾಡಿ ವಾಸ ಬದಲಾಯಿಸಿದೆವು. ಬಹಳ ತಡವಾಗಿಯಾದರೂ (1999) ಸ್ವಂತ ಪ್ಲಾಟ್ ಆಯಿತು. ನಾನು ಸಂಶೋಧನ ಕ್ಷೇತ್ರದಲ್ಲಿ ಗಟ್ಟಿ ನೆಲೆ ಊರಿದೆ. ವ್ಯಾಪಾರಕ್ಕೆ ನಮಸ್ಕಾರ ಹೊಡೆದೆ. ಹೆಗ್ಡೆಯವರು ಡೆಕ್ಕನ್ ಹೆರಾಲ್ಡ್ ತೊರೆದು ನನ್ನ ವ್ಯಾಪಾರವನ್ನು ಮುಂದುವರಿಸಿದರು. ಮುಂದೆ ಮಂಗಳೂರಲ್ಲಿ ಒಂದು ಮನೆ ಮಾಡಿದೆವು. ಮಗಳು ಸರಿತಾ ಓದಿದ್ದು ಬಿ. ಎಸ್ಸಿ. ಆದರೂ ಇಂದು ಮಲ್ಟಿ ಮಿಲಿಯನ್ ಡಾಲರ್ ವ್ಯವಹಾರ ನಡೆಸುವ ಮಲ್ಟಿನೇಷನಲ್ ಕಂಪೆನಿಯಲ್ಲಿ ಸೀನಿಯರ್ ವೈಸ್ ಪ್ರಸಿಡೆಂಟ್ ಆಗಿದ್ದಾಳೆ. ಮಗ ಆಸ್ಟ್ರೇಲಿಯಾಕ್ಕೆ ಹೋಗಿ ಅಲ್ಲಿಯೇ ಓದಿ ಎಮ್. ಬಿ. ಎ. ಮಾಡಿದ. ಕೆಲ ಕಾಲ ಅಲ್ಲೇ ಉದ್ಯೋಗಿಯಾಗಿದ್ದು ಮೂರು ವರುಷದ ಹಿಂದೆ ಅವನದೇ ಮಿಂಗ್ ಗ್ಲೋಬಲ್ ಎಂಬ ಸಂಸ್ಥೆ ಪ್ರಾರಂಭಿಸಿದ. ಹಾಂಗಾಂಗ್ ನಲ್ಲಿ ಅದನ್ನು ರಿಜಿಸ್ಟರ್ ಮಾಡಿಸಿ ಅದರ ಶಾಖೆಯನ್ನು ಆಸ್ಟ್ರೇಲಿಯಾದಲ್ಲಿ ತೆರೆದ. ಸಿಂಗಾಪುರ್ ಮತ್ತು ಭಾರತದಲ್ಲಿ ಅದರ ಶಾಖೆ ತೆರೆಯುವ ಸಿದ್ಧತೆಯಲ್ಲಿ ಇದ್ದಾನೆ.
 ಗೂಬೆ ಮನೆಹೊಕ್ಕರೆ……..


1 comment: