Friday, February 14, 2014

ಅಮೆರಿಕದಲ್ಲಿ ವ್ಯಾಪಾರ


 

ಅಮೆರಿಕದಲ್ಲಿ ವ್ಯಾಪಾರದಲ್ಲಿ ಮೋಸ  ಇಲ್ಲ. ಪ್ರತಿಯೊಂದು ಸಾಮಾನಿಗೂ ನಿಗದಿತ ಬೆಲೆ ಇರುತ್ತದೆ. ಏರುಪೇರಾಗಿರುವುದಿಲ್ಲ. ಚರ್ಚೆಗೆ ಅವಕಾಶ ಇರುವುದಿಲ್ಲ. ದರ ಕಡಿತ ಆಗಿದ್ದರೆ ಆಯಾ ಕಂಪನಿಯರೇ ಘೋಷಿಸುತ್ತಾರೆ. ಒಳ್ಳೆಯ ಬ್ರ್ಯಾಂಡೆಡ್ ಸಾಮಾನಿಗೂ 40%ವರೆಗೆ ಖಡಿತ  ಇರುತ್ತದೆ. ನಿಗದಿತ ದಿನಗಳವರೆಗೆ ಮಾತ್ರ. ಖರೀದಿಸಿದ ಯಾವುದೇ ವಸ್ತು ನಮಗೆ ಒಪ್ಪಿಗೆಯಾಗದೆ ಇದ್ದಲ್ಲಿ ಒಂದು ತಿಂಗಳ ನಂತರವಾದರೂ ಮರಳಿಸಬಹುದು. ಅದರ ರಶೀದಿ ನೀಡಿದಲ್ಲಿ ನಗು ನಗುತ್ತಾ ಆ ವಸ್ತುವನ್ನು ಪಡೆದು ಅದಕ್ಕೆ ತೆತ್ತ ಹಣವನ್ನು ಮರಳಿಸುತ್ತಾರೆ. ಅನಗತ್ಯ ಸಂಭಾಷಣೆ ಇರುವುದಿಲ್ಲ. ಯಾಕೆ ಮರಳಿಸುತ್ತೇವೆ ಎಂದು ವಿವರಣೆ ನೀಡಬೇಕಿಲ್ಲ.

ಸರ್  ಎಂ. ವಿಶ್ವೇಶ್ವರಯ್ಯನವರು ಅಮೆರಿಕಾ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಅಮೆರಿಕ ವ್ಯಾಪಾರಿಗಳ ಪ್ರಾಮಾಣಿಕತೆಯ ಬಗ್ಗೆ ತನ್ನ ಅನುಭವವನ್ನು ದಾಖಲಿಸುತ್ತಾರೆ. ಅವರು ಚಿಕಾಗೋದಲ್ಲಿ ತಮಗೆ ಬೇಕಾದ ವಸ್ತುವನ್ನು ತಮ್ಮ ಸಲಹೆಯಂತೆ ಸಿದ್ಧ ಪಡಿಸಿ ಕೊಡಲು ಒಬ್ಬ ವ್ಯಾಪಾರಿಗೆ ಹೇಳುತ್ತಾರೆ. ಪ್ರವಾಸಿಯಾಗಿದ್ದ ವಿಶ್ವೇಶ್ವರಯ್ಯನವರ ಬಳಿ ಆ ವಸ್ತುಗಾಗಿ ಕಾಯಲು ದಿನಗಳು ಇರಲಿಲ್ಲ. ಹೀಗಾಗಿ ತುರ್ತಾಗಿ ತಾನು ಹೇಳಿದ ದಿನಕ್ಕೆ ಆ ವಸ್ತುವನ್ನು ಸಿದ್ಧಪಡಿಸಿಕೊಡುವಿಯಾದರೆ ನಿನ್ನ ನಿಗದಿತ ಬೆಲೆಗಿಂತ ಒಂದು ಡಾಲರ್ ಹೆಚ್ಚಿಗೆ ಕೊಡುವುದಾಗಿ ವ್ಯಾಪಾರಿಗೆ ಹೇಳುತ್ತಾರೆ. ಅದರಂತೆ ತಾವು ಸೂಚಿಸಿದ  ದಿನ ಹೋದಾಗ ವಿಶ್ವೇಶ್ವರಯ್ಯನವರು ಹೇಳಿದ ವಸ್ತು ಸಿದ್ಧವಾಗಿತ್ತು. ಆದರೆ ಮಾಲೀಕ ಅಂಗಡಿಯಲ್ಲಿ ಇರಲಿಲ್ಲ. ವಿಶ್ವೇಶ್ವರಯ್ಯನವರು ತಾವು ಮಾತುಕೊಟ್ಟಂತೆ ಒಂದು ಡಾಲರ್ ಹೆಚ್ಚು ತೆತ್ತು ತಮ್ಮಸಾಮಾನು ಪಡೆದು ಹೋಗುತ್ತಾರೆ. ವಿಶ್ವೇಶ್ವರಯ್ಯನವರಿಗೆ ಆಶ್ಚರ್ಯ ಅಂದರೆ ಆ ಒಂದು ಡಾಲರನ್ನು ಮರಳಿಸಲು ವಿಶ್ವೇಶ್ವರಯ್ಯನವರನ್ನು ಹುಡುಕಿ ಅಂಗಡಿಯಾತ ಅವರು ತಂಗಿದ್ದ ಹೊಟೇಲಿಗೆ ಬಂದುದು. ಅಮೆರಿಕನ್ನರ ವ್ಯಾಪಾರದಲ್ಲಿಯ ಈ ಪ್ರಾಮಾಣಿಕತೆ ಕಂಡು ವಿಶ್ವೇಶ್ವರಯ್ಯನವರು ಅಭಿಮಾನ ಪಡುತ್ತಾರೆ.

No comments:

Post a Comment