Saturday, November 30, 2013

ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ-ಮುನ್ನುಡಿ

                 ನನ್ನ ಸಂಶೋಧನಾ ಕೃತಿ ತುಳುವರ  ಮೂಲತಾನದ ಮುನ್ನುಡಿ
ಸಂಶೋಧನಾಧಾರಿತ ಅಧ್ಯಯನಗಳು ಇತರ ವಿದ್ವತ್ ಕಾರ್ಯಗಳು ಇಂದಿನ ದಿನಗಳಲ್ಲಿ ವಿಪುಲವಾಗಿ ನಡೆಯುತ್ತಿದ್ದರೂ, ಹೆಚ್ಚಿನ ಅಂಥ ಕೆಲಸಗಳು ಅಧ್ಯಯನ ಕೊಠಡಿಗಳಿಗೆ ಸೀಮಿತವಾಗಿರುತ್ತವೆಯೇ. ಹೊರತು ಕ್ಷೇತ್ರಕಾಯಾ‍್ಧಾರಿತವಾಗಿರುವುದಿಲ್ಲ. ಇದೇನೂ ತಪ್ಪಲ್ಲ. ಅಧ್ಯಯನ ವಿಷಯವನ್ನು ಹೊಂದಿಕೊಂಡು ಕಾರ್ಯವಿಧಾನ ರೂಪಿಸಲ್ಪಡುತ್ತದೆ. ಆದರೆ ಕೆಲವೊಂದು ಸಾಂಸ್ಕೃತಿಕ ವಿಚಾರಗಳ ಅನ್ವೇಷಣೆಗೆ ಕ್ಷೇತ್ರಕಾರ್ಯ ಅನಿವಾರ್ಯ. ನೇರವಾಗಿ ಜನರ ನಡುವಿಗೆ ತೆರಳಿ, ನಾನಾ ವಿಧದ ಕ್ಲೇಶಗಳನ್ನು ಅನುಭವಿಸಿ, ಸಂಬಂಧಪಟ್ಟ ವ್ಯಕ್ತಿಗಳನ್ನು ಪ್ರತ್ಯಕ್ಷ ಕಂಡು, ಕೇಳಿ, ಅವರನ್ನು ವಿಶ್ವಾಸಕ್ಕೆ ತೆಕ್ಕೊಂಡು ವಿಷಯ ಸಂಗ್ರಹಮಾಡಿ, ವಿಶ್ಲೇಷಣೆ ನಡೆಸುವುದು ಬೇರೆಯೇ. ಅದೊಂದು ಸಂತೃಪ್ತಿಯನ್ನೂ, ಸಾರ್ಥಕಭಾವವನ್ನೂ ಉಂಟುಮಾಡುವುದು ಸಹಜ. ಹಲವು ಹತ್ತು ವ್ಯಕ್ತಿಗಳಲ್ಲಿ ಹಂಚಿಹೋಗಿರುವ ವಿವಿಧ ರೀತಿಯ ತಿಳುವಳಿಕೆಗಳನ್ನು ಯುಕ್ತರೀತಿಯಲ್ಲಿ ಸಂಗ್ರಹಿಸುವುದು ಸಾಮಾನ್ಯಕಾರ್ಯವಲ್ಲ. ಅದಕ್ಕೆ ವಿಶೇಷ ಜಾಣ್ಮೆಯೂ, ಅಪಾರ ತಾಳ್ಮೆಯೂ, ಶ್ರಮ ಸಹಿಷ್ಣುತೆಯೂ ಅಗತ್ಯ. ಅಂಥ ಅಪೂರ್ವ ವಿದುಷಿಯರಲ್ಲಿ ಡಾ|| ಇಂದಿರಾ ಹೆಗ್ಗಡೆಯವರೂ ಒಬ್ಬರು.
ಸೃಜನಶೀಲ ಬರಹಗಾರ್ತಿಯೂ, ಉತ್ತಮ ಸಂಶೋಧಕಿಯೂ ಅಗಿರುವ ಡಾ|| ಇಂದಿರಾ ಹೆಗ್ಗಡೆಯವರು ಈಗಾಗಲೇ ಸಂಶೋಧನರಂಗದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದ್ದಾರೆ. ಅವರ ಈ ವಿಶಿಷ್ಟ ಕೃತಿಯೂ ಹಂಪಿಯ ಕನ್ನಡವಿಶ್ವವಿದ್ಯಾಲಯದ ಪ್ರತಿಷ್ಠಿತ ಡಿ.ಲಿಟ್. ಪದವಿಗಾಗಿ ಸಾದರಪಡಿಸಿದ ನಿಬಂಧವಾಗಿದೆ. ಈ ಮೊದಲು ಪ್ರಕಟವಾದ ಅವರ `ಬಂಟರು - ಒಂದು ಸಮಾಜೋಸಾಂಸ್ಕೃತಿಕ ಅಧ್ಯಯನ' ಎಂಬ ಬೃಹತ್ ಸಂಶೋಧನ ಕೃತಿಯೂ ಕ್ಷೇತ್ರಕಾರ್ಯಾಧಾರಿತವಾದುದು. ಮುಖ್ಯವಾಗಿ ಇವರು ತಮ್ಮ ಸಂಶೋಧನಾ ಕಾರ್ಯವನ್ನು ತುಳುನಾಡಿನ ಪ್ರಾದೇಶಿಕ ಸಂಸ್ಕೃತಿಯ ಅಧ್ಯಯನಕ್ಕೆ ಸೀಮಿತಗೊಳಿಸಿದ್ದಾರೆ. ಅವರ `ತುಳುವರ ಮೂಲತಾನ ಆದಿ ಆಲಡೆ' - ಪರಂಪರೆ ಮತ್ತು ಪರಿವರ್ತನೆ' - ಎಂಬೀ ಸಂಶೋಧನ ವಿಚಾರವೂ ತುಳುನಾಡಿನ ಪ್ರಾಚೀನ ಮೂಲಸಂಸ್ಕೃತಿಯ ಸಾರವನ್ನು ಸಂಗ್ರಹಿಸುವ ಪ್ರಯತ್ನವನ್ನು ಒಳಗೊಂಡಿದೆ. ಆದಿ ಆಲಡೆಯ ಮೂಲವನ್ನು ನಿಮಿತ್ತವಾಗಿಸಿ ಇವರು ಕೈಗೊಂಡ ಪ್ರಸ್ತುತ ಅಧ್ಯಯನವು ತುಂಬ ಸೂಕ್ಷ್ಮವೂ, ಸಂಕೀರ್ಣವೂ ಆದದ್ದು, ಆಲಡೆಯ ವೀಶಕ್ತಿಗಳ, ಅದರಲ್ಲೂ ಬೆರ್ಮೆರ್ (ಬ್ರಹ್ಮ), ನಾಗಶಕ್ತಿಗಳ ಆವಿರ್ಭಾವ, ವಿಕಾಸಗಳ ಮೂಲ ಹಂತಗಳು ಗತ ಇತಿಹಾಸದ ಬಿರುಗತ್ತಲೆಯಲ್ಲಿ ಬೇರಿಳಿಸಿಕೊಂಡವುಗಳಾಗಿವೆ. ಅಂಥ ಗಹನ ನಿಗೂಢ ಎಡೆಗಳಿಗೆ ಅನ್ವೇಷಣೆಯ ಬೆಳಕು ಹಾಯಿಸುವ ಪ್ರಯತ್ನ ಸುಲಭದ್ದಲ್ಲ. ಈ ಸಾಹಸವನ್ನು ಎಳಸಿದ ಲೇಖಕಿ ತಮ್ಮ ಉದ್ದೇಶಕ್ಕಾಗಿ ವಿವಿಧ ವರ್ಗಗಳ ನೂರಾರು ವಕ್ತೃಗಳನ್ನು ಮಾತನಾಡಿಸಿದ್ದಾರೆ. ಅಧ್ಯಯನಕ್ಕೆ ಪೂರಕವಾಗಿ ಕನ್ನಡ ಹಾಗೂ ಇಂಗ್ಲಿಷಿನಲ್ಲಿರುವ ನೂರಾರು ಅಧ್ಯಯನಗ್ರಂಥಗಳನ್ನು ಕೂಲಂಕಷವಾಗಿ ಗಮನಿಸಿದ್ದಾರೆ. ಹೀಗೆ ಇವರು ಕಲೆಹಾಕಿದ ಮಾಹಿತಿಯ ರಾಶಿ ಬೆರಗು ಹುಟ್ಟಿಸುವಷ್ಟು ಅಪಾರ ಪ್ರಮಾಣದ್ದಾಗಿದೆ !
ಈ ವಿಸ್ತಾರವಾದ ಅಧ್ಯಯನವು 8 ಅಧ್ಯಾಯಗಳಾಗಿ ವಿನ್ಯಾಸಗೊಂಡಿದೆ ತುಳುನಾಡಿನ ನಾಗಾರಾಧನೆಯ ಮೂಲ, ವಿಕಾಸಗಳ ಬಗೆಗಿನ ವಿವರಗಳನ್ನು ಹಾಗೂ ಇದಕ್ಕೆ ರಕವಾದ ಇತರ ಸಾಂಸ್ಕೃತಿಕ ವಿಚಾರಗಳನ್ನು ಲೇಖಕಿ ಸಾವಕಾಶವಾಗಿ, ವ್ಯವಸ್ಥಿತವಾಗಿ ಹಾಗೂ ಕುತೂಹಲಕರವಾಗಿ ಮಂಡಿಸುತ್ತ ಹೋಗುತ್ತಾರೆ. ನಿಬಂಧದ ಕೊನೆಯಲ್ಲಿ ಅನುಬಂಧವಾಗಿ ತುಂಬ ಉಪಯುಕ್ತವಾದ ಸಾಂಸ್ಕೃತಿಕ ಪದಕೋಶವನ್ನು ನೀಡಿದ್ದಾರೆ.
ತುಳುನಾಡಿನ ವೈದಿಕೇತರ ಸಮಾಜಗಳ ಜನಪದರು ಜಾತಿ, ಅಂತಸ್ತು ನಿರಪೇಕ್ಷವಾಗಿ ಇಂದಿಗೂ ನಂಬಿಕೆಯಿಂದ ನಡೆದುಕೊಳ್ಳುವ, ಹಿರಿಯರು ನಂಬಿದ ವಶಕ್ತಿಗಳು ನೆಲೆಯೂರಿದ ನಿರ್ದಿಷ್ಟ ಪ್ರಾಚೀನ ತಾಣಗಳೇ ಆಲಡೆಗಳೆಂದೂ, ಅವು ಕುಟುಂಬದ ಸದಸ್ಯರ ಹುಟ್ಟು ಸಾವುಗಳ ಪರೋಕ್ಷ ನಿಯಂತ್ರಕ ಸ್ಥಾನವೆಂದೂ, ಸಾಂಸ್ಕೃತಿಕ ಟಕವೆನಿಸುವ ಸಹಬಾಳ್ವೆಯ ಕ್ಷೇತ್ರವೆಂದೂ ಲೇಖಕಿ ನಿರೂಪಿಸುತ್ತಾರೆ. `ಆಲಡೆ' ಶಬ್ದದ ವ್ಯುತ್ಪತ್ತಿ ವಿಚಾರವಾಗಿ ವಿವರವಾಗಿ ಚರ್ಚಿಸಲಾಗಿದೆ. ಆಲಡೆಗಳ ಸ್ವರೂಪ, ಆಲಡೆ ವಗಳ ವಿವರಗಳೊಂದಿಗೆ, ಬಹುತೇಕ ಆಲಡೆಗಳು ನೀರಿನಾಶ್ರಯದ ತಗ್ಗಾದ, ತಂಪು ಜಾಗದಲ್ಲಿ, ಕಾಡುಗಳ ಬಳಿ ರೂಗೊಂಡಿರುವ ಔಚಿತ್ಯವನ್ನು ಸೂಚಿಸಲಾಗಿದೆ.
ನಾಗರಿಕಪೂರ್ವ ಮಾನವ ಕೃಷಿ ಸಂಸ್ಕೃತಿಯ ಮುಖ್ಯಟ್ಟದಲ್ಲೆ ತುಳುನಾಡಿನ ಸಂಸ್ಕೃತಿ ವಲಯವೂ, ಆರಾಧನಾ ವಿಧಿಗಳೂ ವಿಕಾಸಗೊಂಡುದನ್ನು ಮಾನವಶಾಸ್ತ್ರ, ಪುರಾಣಸಾಹಿತ್ಯ ಹಾಗೂ ಜನಪದ ಸಾಹಿತ್ಯಗಳ ಆಧಾರದಿಂದ ಪ್ರಸ್ತಾಪಿಸಿ ಜೀವವಿಕಾಸ ಹಾಗೂ ಸಂಸ್ಕೃತಿವಿಕಾಸದ ಕೆಲವು ಚೆಹರೆಗಳನ್ನು ಲೇಖಕಿ ತೋರಿಸಿದ್ದಾರೆ. ಆದಿಮಕಾಲದ ನಾಗಪೂಜೆಯನ್ನು ಉಲ್ಲೇಖಿಸಿ, ತುಲನಾತ್ಮಕವಾಗಿ ಚೈನಾ, ಜಪಾನ್ ಕಾಂಬೋಡಿಯ ದೇಶಗಳ ಜನಪದ ಪುರಾಣಗಳಲ್ಲೂ ಸೃಷ್ಟಿ, ನೀರು ಹಾಗೂ ಸೃಜನಶಕ್ತಿಯ ಸಂಕೇತವಾದ ನಾಗನಿಗೆ ಇರುವ ಸಂಬಂಧವನ್ನೂ ಗುರುತಿಸಿದ್ದಾರೆ.
ತುಳುನಾಡಿನುದ್ದಕ್ಕೂ ಇರುವ ಹಲವಾರು ಮೂಲತಾನ - ಆಲಡೆಗಳನ್ನು ಲೇಖಕಿ ಸಂದರ್ಶಿಸಿ, ಅಲ್ಲಿ ನೆಲಸಿದ ವಶಕ್ತಿಗಳ ಹಾಗೂ ಅಲ್ಲಿ ಜರಗುವ ಆರಾಧನಾ ಕಾರ್ಯಗಳ ಕುರಿತು ಸವಿವರವಾದ ಮಾಹಿತಿ ನೀಡಿದ್ದಾರೆ. ಜನಪದ ಆರಾಧನಾ ವಲಯದಲ್ಲಿ ಪ್ರಾಣಿ ಮೂಲದ ವಗಳೂ ಇವೆಯಷ್ಟೆ ? ತುಳುನಾಡಿನಲ್ಲಿ ಪಂಜುರ್ಲಿ, ಪಿಲಿಚಾಮುಂಡಿ, ಮೈಸಂದಾಯ, ನಾಗ ಮೊದಲಾದ ವಶಕ್ತಿಗಳಿವೆ. ಈ ವಗಳ ಆರಾಧನೆ ಭಯಮೂಲದ್ದೆನಿಸುತ್ತದೆ. ಇವುಗಳಲ್ಲಿ ಕಾಡುಹಂದಿ, ಹುಲಿ, ಕಾಡುಕೋಣಗಳು ಜನರ ದೃಷ್ಟಿಯಲ್ಲಿ ಪೂಜ್ಯ ಪ್ರಾಣಿಗಳೇನಲ್ಲ. ನಿಜವಾಗಿ ಈ ಪ್ರಾಣಿಗಳನ್ನು ನೇರವಾಗಿ ಪೂಜಿಸದೆ, ಅವುಗಳ ಅಂತರ್ಯಾಮೀ ಶಕ್ತಿಯನ್ನು ವರೂಪದಲ್ಲಿ ಆರಾಧಿಸುತ್ತಾರೆನ್ನಬಹುದು. ನಾಗನ ವಿಚಾರ ಮಾತ್ರ ಭಿನ್ನವಾಗಿ ನಿಲ್ಲುತ್ತದೆ. ನಾಗನ ವಿಚಾರದಲ್ಲಿ ನಾನಾ ನಂಬಿಕೆಗಳೂ ಐತಿಹ್ಯಗಳೂ, ಕಲ್ಪನಾವಿಲಾಸಗಳೂ ರಾತನ ಕಾಲದಿಂದಲೇ ಇವೆ. ಅದು ಬಹು ಪವಿತ್ರವಾದ ಜೀವಿಯೆಂದು ಭಾವಿಸಲಾಗಿದೆ. ಅಂಥ ಶ್ರೇಷ್ಠ ಜನೋಪಕಾರಿ ಪ್ರಾಣಿಯಲ್ಲದಿದ್ದರೂ, (ಉದಾಹರಣೆಗೆ ಗೋವಿನ ಹಾಗೆ) ವಿವಿಧ ಆರಾಧನಾ ವೇದಿಕೆಗಳಲ್ಲೂ ಸಾಂಸ್ಕೃತಿಕ, ಕಲಾವಿಷಯಕ ರಂಗಗಳಲ್ಲೂ ನಾಗನು ಗಳಿಸಿದ ಬಹುಮುಖ ಪ್ರಾಶಸ್ತ್ಯವೂ, ಗೌರವ ಭಕ್ತಿಗಳೂ ಆಶ್ಚರ್ಯಹುಟ್ಟಿಸುತ್ತವೆ. ನಾಗನು `ಬಿರ್ಮೆರ್' ಆಗಿ, ನಾಗಬ್ರಹ್ಮನಾಗಿ ಸೃಷ್ಟಿಕರ್ತಾರಸ್ಥಾನವನ್ನು ಪಡೆದುದನ್ನು, ನಾಗಶಕ್ತಿಯು ಇತರ ವಶಕ್ತಿಗಳೊಂದಿಗೆ ಸಮೀಕರಣಗೊಂಡು, ಸಂಯುಕ್ತ ಶಕ್ತಿಗಳಾಗಿ ಕ್ರಿಯಾಶಾಲಿಗಳಾದುದನ್ನು, ನಾಗಸ್ವರೂಪಿ ಹಾಗೂ ನಾಗಸಂಬಂಧೀ ವಗಳ ವಿವರಗಳನ್ನು ಲೇಖಕಿ ನೀಡಿ, ನಾಗನ ವಿಶ್ವರೂಪದರ್ಶನವನ್ನು ಮಾಡಿಸಿದ್ದಾರೆ ಎಂದರೂ ಹೆಚ್ಚಲ್ಲ.
ಆಲಡೆ ವಗಳಾದ ನಾಗಬ್ರಹ್ಮ, ನಾಗಕನ್ಯೆ (ಯಕ್ಷಿ ), ರಕ್ತೇಶ್ವರಿ, ಮೈಸಂದಾಯ, ಗುಳಿಗ ಮೊದಲಾದ ವಶಕ್ತಿಗಳ ಸ್ವರೂಪವನ್ನು, ಅವುಗಳಿಗಿರುವ ನಾಗಸಂಬಂಧವನ್ನು, ಆಲಡೆ ವಗಳ ಆರಾಧನಾ ವಿಧಾನಗಳನ್ನೂ ವಿವರಿಸಲಾಗಿದೆ. ವೈದಿಕೇತರ ವಿಕ ನೆಲೆಗಳಾದ ಆಲಡೆಗಳಲ್ಲಿ ಕೆಲವು ವೈದಿಕ ಸಂಸ್ಕೃತಿಯ ಪ್ರಭಾವದಿಂದ ಬ್ರಹ್ಮಲಿಂಗೇಶ್ವರ, ಲೋಕನಾಥೇಶ್ವರ, ಅಥವಾ ಸುಬ್ರಹ್ಮಣ್ಯ ದೇವಸ್ಥಾನಗಳಾಗಿ ಪರಿವರ್ತನೆಗೊಂಡುದನ್ನು ಅಂಥ ವಸಂಕೀರ್ಣಗಳ ವಿಚಾರಗಳನ್ನೂ ಅಲ್ಲಿನ ಉತ್ಸವಾದಿಗಳ ವಿಶೇಷತೆಗಳನ್ನು ವಿವರಿಸಲಾಗಿದೆ.
ನಾಗಾರಾಧನೆಗೆ ಸಂಬಂಧಿಸಿದ ವಿವಿಧ ಪ್ರಕಾರಗಳಾದ ತಂಬಿಲ, ನಾಗದರ್ಶನ, ದಕ್ಕೆ ಬಲಿ, ಆಶ್ಲೇಷಾ ಬಲಿ, ಬ್ರಹ್ಮ ಮಂಡಲ, ನಾಗಮಂಡಲಗಳ ಸರ್ವಪ್ರಕ್ರಿಯೆಗಳ ವರ್ಣನೆ ಇಲ್ಲಿದೆ. ಹಾಗೆಯೇ, ಸ್ವಾಮಿಕೋಲ, ಕಾಡ್ಯನಾಟ, ದೆಯ್ಯೊಲೆ ನಲಿಕೆ, ಮತ್ತು ಬಾಕುಡರ ಕೋಲಗಳಂಥ ಸದೃಶ ಕಲಾಪಗಳನ್ನು ಉದಾಹರಿಸಲಾಗಿದೆ. ನಾಗಾರಾಧನೆಗೆ ಸಂಬಂಧಿಸಿದ ಕೆಲವು ಚಾರಿತ್ರಿಕ ದಾಖಲೆಗಳನ್ನು ಸಂದರ್ಭೋಚಿತವಾಗಿ ನೀಡಲಾಗಿದೆ.
ಪ್ರಸ್ತುತ ಅಧ್ಯಯನವು ತುಳು ಸಂಸ್ಕೃತಿಯ ಅನೇಕ ಮಗ್ಗುಲುಗಳಲ್ಲಿ ನಾಗಸಂಬಂಧ ಅಥವಾ ನಾಗ ಪ್ರಭಾವವನ್ನು ಗುರುತಿಸುತ್ತದೆ. ತುಳು ನಾಡಿನ ಕಂಬಳ ಎಂಬುದು ಕೇವಲ ಕೋಣಗಳ ಓಟದ ಸ್ಪರ್ಧೆಯಷ್ಟೇ ಆಗಿರದೆ, ಕೃಷಿ ಸಂಸ್ಕೃತಿಯ ಹಿನ್ನೆಲೆಯಲ್ಲಿ ರೂಪುಗೊಂಡ ನಾಗಾರಾಧನೆಯೂ ಆಗಿದೆ ಎಂಬುದನ್ನು ವಿಸ್ತಾರವಾಗಿ ಪ್ರತಿಪಾದಿಸಲಾಗಿದೆ. ಹಲವಾರು ಕಂಬಳಗಳ ವಿವರಣಾತ್ಮಕ ಸಮೀಕ್ಷೆಯನ್ನು ನೀಡಲಾಗಿದೆ.
ತುಳುನಾಡಿನ ಅನೇಕ ಆಚರಣಾತ್ಮಕ ವಿಧಿಗಳಲ್ಲಿ ಇಲ್ಲಿನ ಜನರ ಉತ್ತರಕ್ರಿಯೆಯಲ್ಲಿನ ಕೆಲವು ವಿಧಿಗಳು ಯಥಾವತ್ತಾಗಿ ಸೇರ್ಪಡೆಗೊಂಡಿರುವ ಕುತೂಹಲಕರ ಅಂಶವನ್ನು ಲೇಖಕಿ ಎತ್ತಿ ಹೇಳಿದ್ದಾರೆ.
ರಕ ಅಧ್ಯಯನದಲ್ಲಿ ಅನೇಕ ಅವಳಿವಗಳ ಆರಾಧನೆಯನ್ನೂ, ಇತರ ಕೆಲವು ವಗಳ ಕೋಲ ಇತ್ಯಾದಿಗಳನ್ನೂ `ಲೆಕ್ಕೇಸಿರಿ'ಗಳ ವಿಚಾರವನ್ನು `ಕಡ್ಯ' (ಗಡಿಗೆ)ಸಿರಿ ವಿವರಿಸಲಾಗಿದೆ. ತುಳುನಾಡ ಸಿರಿಯ ಕಥನವು, ತುಳುನಾಡಿನ ವಪರಿಕಲ್ಪನೆ ಹಾಗೂ ಆರಾಧನಾ ವಿಧಾನವು `ನಿರಾಕಾರ ಕಲ್ಪನೆಯಿಂದ ಸಾಕಾರ ಕಲ್ಪನೆಯತ್ತ ಹೊರಳಿದುದನ್ನು ಕಥಾರೂಪ ಅಭಿವ್ಯಕ್ತಿಯೆಂದು ಅಭಿಪ್ರಾಯ ಪಡಲಾಗಿದೆ. ಇದು ವಿಚಾರಣೀಯ ವಿಚಾರ.
ಒಟ್ಟಿನಲ್ಲಿ ನಾಗಾರಾಧನಾ ಪ್ರಪಂಚ ಹಾಗೂ ಭೂತಾರಾಧನಾ ಪ್ರಸ್ಥಾನಗಳ ಅನೇಕ ಮುಖಗಳು ಈ ಅಧ್ಯಯನದಲ್ಲಿ ಅನಾವರಣಗೊಂಡಿವೆ. ಆಲಡೆಯಂಥ ವಿಚಾರದಲ್ಲಿ ಇಷ್ಟೊಂದು ವಿಲವಾದ ಅಧ್ಯಯನ ಮೊತ್ತಮೊದಲಿಗೆ ಇಲ್ಲಿ ಪ್ರಸ್ತುತಗೊಂಡಿದೆ.
ವಿವರಣಾತ್ಮಕವಾದ ಈ ಬೃಹತ್ ಸಂಪ್ರಬಂಧ ಅನೇಕ ಜಿಜ್ಞಾಸೆಗಳನ್ನು ಹುಟ್ಟುಹಾಕುತ್ತದೆನ್ನ ಬಹುದು. ಕೆಲವು ವಿಚಾರಗಳನ್ನು ಈ ಸಂದರ್ಭದಲ್ಲಿ ಒಂದಿಷ್ಟು ಚರ್ಚಿಸಬೇಕೆನಿಸುತ್ತದೆ. ಜನಪದ ಕಥನಗಳಲ್ಲೂ, ಆರಾಧನಾ ಪ್ರಕ್ರಿಯೆಗಳಲ್ಲೂ ವಾಸ್ತವಿಕತೆಯ ಬದಲು ಸಾಂಕೇತಿಕತೆಯನ್ನು ವಿಶೇಷವಾಗಿ ಬಳಸಲಾಗುತ್ತದೆ. `ಸತ್ಯ'ದ ರಂಗಸ್ಥಲವೆಂದು ಭಾವಿಸಲಾಗುವ ವಾರಾಧನೆಯ ವಲಯದಲ್ಲಿ ಪ್ರದರ್ಶನಗೊಳ್ಳುವ ಸತ್ಯ ಯಾವ ಸ್ವರೂಪದ್ದು ? ವ ಕಥನಗಳಲ್ಲಿ ನಿರೂಪಣೆಗೊಳ್ಳುವ ಸಾಂಕೇತಿಕವೂ ಅತಿರಂಜಿತವೂ ಆದ ಅಂಶಗಳೂ, ವ ಮಾಧ್ಯಮ ವ್ಯಕ್ತಿಗಳು ಬಳಸುವ ಕಾವ್ಯಾತ್ಮಕವೂ ಪ್ರಭಾವಶಾಲಿಯೂ ಆದ ನುಡಿಗಟ್ಟುಗಳೂ, ವಾರಾಧನೆಯ ವಕ್ತಾರರು ನೀಡುವ ವಿವರಗಳೂ, ವ ಮಹಿಮಾ ಕಥನಗಳೂ ಸತ್ಯಸ್ಯಸತ್ಯ ವಾಸ್ತವಿಕ ಸತ್ಯಾಂಶಗಳೆನ್ನುವುದಕ್ಕಿಂತ ಭಿನ್ನಶೈಲಿಯಲ್ಲಿ ನಿರೂಪಿತವಾದ `ಭಾವಸತ್ಯ' ಅಥವಾ `ಸಾಪೇಕ್ಷಸತ್ಯ' ಎಂದು ತಿಳಿಯುವುದು ಲೇಸು. ಕಲ್ಪನಾ ಭವ್ಯವೆನಿಸುವ ಕಾವ್ಯಮಯ ಸ್ವಾರಸ್ಯ ಆಸ್ವಾದನೆಗೆ ಅರ್ಹ; ಇತಿಹಾಸವನ್ನು ಕಟ್ಟಲು ಆಧಾರವಾಗದು' !  ಅವಲಂಬನೀಯ ಪ್ರಮಾಣಗಳೆನಿಸಲಾರದ ಇಂಥ ವಿವಿಧ ವರ್ಣರಂಜಿತ ಪ್ರಭಾವಳಿಗಳನ್ನು ಕಳಚದೆ ಸತ್ಯದರ್ಶನವಾಗದೆನ್ನಬೇಕಾಗುತ್ತದೆ. ಸತ್ಯನಾರದ ಸಿರಿ, ಕೋಟಿ-ಚೆನ್ನಯ, ಕೋಟೆದ ಬಬ್ಬು ಮೊದಲಾದ ಮಾನವ ಮೂಲದ ವಕಥನಗಳಲ್ಲಿನ ಅತಿಮಾನುಷ, ಅವಾಸ್ತವ ನಿಗೂಢ ವಿಚಾರಗಳು, ಅಯೋನಿಜತ್ವ, ಶಕ್ತಿಮಹಿಮಾ ಪವಾಡ - ಇಂಥ ವಿಚಿತ್ರವಿಷಯಗಳನ್ನು ನಿವಾರಿಸಿ ಕೊಂಡರೆ, ಸರಳ ಸಹಜವಾದ ಕಥನದ ಹಂದರ ಲಭ್ಯವಾಗುತ್ತದೆ. ಇದು ಸತ್ಯಕ್ಕೆ ಸಮೀಪವಿರುವ ಸಾಧ್ಯತೆ ಹೆಚ್ಚು. ಮುಖ್ಯವಾಗಿ ಆರಾಧನೆಗೆ ಭಾವುಕತೆ ಬೇಕು; ಆದರೆ ಅನ್ವೇಷಣೆಗಲ್ಲ.
ಇನ್ನೊಂದು ವಿಚಾರವೆಂದರೆ, ಯಾವುದೇ ಸಂಶೋಧನ ಅಥವಾ ಅಧ್ಯಯನದ ಉದ್ದೇಶಗಳಲ್ಲಿ ಪ್ರಸ್ತುತತೆ ಹಾಗೂ ಔಚಿತ್ಯದ ಪ್ರಶ್ನೆಯೂ ಮುಖ್ಯವಾಗುತ್ತದೆ. ಸಂಶೋಧನ ದೊಂದಿಗೆ ವಿಮರ್ಶೆಯೂ, ನ್ಯಾಯದೃಷ್ಟಿಯೂ ಇರಬೇಕಾಗುತ್ತದೆ. ಸಾಂದ್ರವಾದ ಮಾಹಿತಿ ದಾಖಲಾತಿ ಒಂದು ಮುಖ್ಯ ಮಜಲು. ಅಲ್ಲಿಗೆ ಸಂಶೋಧನೆ ವಿರಮಿಸುವುದಿಲ್ಲ. ಅಧ್ಯಯನದ ಫಲಶ್ರುತಿ ಆಮೇಲಷ್ಟೇ ಲಭ್ಯವಾಗಬೇಕು. ಹಿರಿಯ ಸಂಶೋಧಕ ಗೋವಿಂದ ಪೈಗಳೆಂದಂತೆ `ಸರ್ವಸಂಗ್ರಹ ಮೊದಲು, ಸತ್ಯ ಸಂಗ್ರಹ ಆಮೇಲಿನದು'
ತುಳುನಾಡಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದ್ದ ಊಳಿಗಮಾನ್ಯ ಪದ್ಧತಿ, ಶ್ರೇಣೀಕೃತ ಸಮಾಜ ವ್ಯವಸ್ಥೆ, ಗುಪ್ತವಾಗಿಯೋ ವ್ಯಕ್ತವಾಗಿಯೋ ಇದ್ದ ಶೋಷಣೆ, ಅಸಮಾನತೆ, ಅಸ್ಪೃಶ್ಯತೆ ಇತ್ಯಾದಿಗಳನ್ನು ಅಲ್ಲಗಳೆಯಲಾಗುವುದಿಲ್ಲ. ನೇಮ, ಕೋಲ, ನಾಗಮಂಡಲ, ಧರ್ಮನೇಮ, ಕಂಬಳ ಇತ್ಯಾದಿಗಳು ಊರಿನ ಹಬ್ಬಗಳಂತೆಯೂ, ಸಂಸ್ಕೃತಿಯ ಶ್ರೇಷ್ಠ ಬಿಂಬಗಳಂತೆಯೂ ವೈಭವೀಕೃತವಾಗಿ ಪ್ರತಿಬಿಂಬಿತವಾಗಬಹುದು. ಅಂಥ ಸಮಾರಂಭ ಗಳಲ್ಲಿ ಸಮಾಜದ ಹಲವು ವರ್ಗಗಳೂ ಪಾಲುಗೊಳ್ಳಬಹುದು. ಕೆಳಸ್ತರದವರಿಗೂ ಕೆಲವೊಂದು ಊಳಿಗಗಳು ಇರಬಹುದು. ಇಷ್ಟಕ್ಕೇ ಅಂಥವುಗಳಲ್ಲಿ ಸಾಮಾಜಿಕ ನ್ಯಾಯ ವುಂಟೆಂದು ಸಂಭ್ರಮಿಸುವಂತಿಲ್ಲ. ಹಾಗಾಗಿ ಹಿಂದಿನ ಕೆಲವು ಪದ್ಧತಿ ಪರಂಪರೆಗಳನ್ನು ತಕ್ಕಮಟ್ಟಿಗಾದರೂ ಇಂದಿಗೆ ಆನ್ವಯಿಕವಾಗಿ ಸಂಗತಗೊಳಿಸಬೇಕಾದರೆ, ಸಾಮಾಜಿಕ ನ್ಯಾಯ ದೃಷ್ಟಿಯಿಂದ ಕೆಲವೊಂದು ಸೂಕ್ತ ತಿದ್ದುಪಡಿ, ಬದಲಾವಣೆಗಳು ಅನಿವಾರ್ಯ. ಇದು ಸುಲಭವೂ ಅಲ್ಲ. ಆದರೆ ಅಂಥ ಪ್ರಯತ್ನ ಸಾಗಿದರೆ ತಪ್ಪಿಲ್ಲ. ಅಧ್ಯಯನ, ಸಂಶೋಧನೆಗಳು ಆ ಬಗೆಯ ನ್ಯಾಯಯುತ ಪ್ರಯತ್ನಕ್ಕೆ ದಿಕ್ಸೂಚಿಯಾಗಿ ಬೆಂಬಲ ನೀಡುವುದು ವಿಹಿತ. ಇದಿಷ್ಟು ಸಂಸ್ಕೃತಿ ಶೋಧನೆಗೆಳಸುವ ನಮ್ಮ ಸಂಶೋಧಕ ಮಿತ್ರರಲ್ಲಿ ನನ್ನ ವಿನಮ್ರ ನಿವೇದನೆ.
ಹಿರಿಯ ಸಂಸ್ಕೃತಿ ಸಂಶೋಧಕಿ ಡಾ|| ಇಂದಿರಾ ಹೆಗ್ಗಡೆಯವರ ಈ ಅಪೂರ್ವ ಅಧ್ಯಯನ ಸಾಹಸಕ್ಕಾಗಿ ಅವರನ್ನು ಮನಸಾರೆ ಅಭಿನಂದಿಸುತ್ತೇನೆ. ಈ ಗ್ರಂಥವು ಮುಂದಿನ ಹಲವು ಅಧ್ಯಯನಗಳಿಗೆ ಆಕರವಾಗಲೆಂದೂ, ಇನ್ನಷ್ಟು ವಿದ್ವತ್ ಕೃತಿಗಳು ಅವರಿಂದ ಸಂಸ್ಕೃತಿರಂಗಕ್ಕೆ ಕೊಡುಗೆಯಾಗಿ ಸಲ್ಲಲೆಂದೂ ಹಾರೈಸುತ್ತೇನೆ.

ಅಮೃತ ಸೋಮೇಶ್ವರ
12-07-2011                       `ಒಲುಮೆ' ಕೋಟೆಕಾರು




ತುಳುವರ ಮೂಲತಾನ ಆದಿ ಆಲಡೆಯ :ಪರಂಪರೆ ಮತ್ತು ಪರಿವರ್ತನೆ : Photo 1  ನಾಗಬೆರ್ಮರ ಕೋಲ

ತುಳುವರ ಮೂಲತಾನ ಆದಿ ಆಲಡೆಯ :ಪರಂಪರೆ ಮತ್ತು ಪರಿವರ್ತನೆ : Photo 1  ನಾಗಬೆರ್ಮರ ಕೋಲ

ತುಳುವರ ಮೂಲತಾನ ಆದಿ ಆಲಡೆಯ :ಪರಂಪರೆ ಮತ್ತು ಪರಿವರ್ತನೆ : Photo 1  ನಾಗಬೆರ್ಮರ ಕೋಲ Ullalti 

ತುಳುವರ ಮೂಲತಾನ ಆದಿ ಆಲಡೆಯ :ಪರಂಪರೆ ಮತ್ತು ಪರಿವರ್ತನೆ : Photo 1  ನಾಗಬೆರ್ಮರ ಕೋಲ
Ullaya

Original form of Naga berrma $ New one Adypadi Bajape
Brahma lingeshwara at Marnikatte kulluru





No comments:

Post a Comment