Showing posts with label ಕವನ. Show all posts
Showing posts with label ಕವನ. Show all posts

Sunday, September 22, 2013

ಸಾಹಿತ್ಯ ಜಾತ್ರೆ


ಸಾಹಿತ್ಯ ಜಾತ್ರೆ

ಹರಿದರು ಜನ ಹೊಳೆಯಂತೆ
ಅಣೆಕಟ್ಟಿನಲ್ಲಿ ಬಂದಿಯಾದ ನೀರಾದರು
ಹರಿಯುವ ನೀರು ಸೋರುತ್ತಲೇ ಇತ್ತು
ಸೇರುವ ನೀರು ಸೇರುತ್ತಲೇ ಇತ್ತು
ಒಳಗಿದ್ದವರು ಹೊಟ್ಟೆಯ ಹಸಿವಿಗೆ
 
ಸ್ಪಂಧಿಸಲಿಲ್ಲ.
ಬೌದ್ಧಿಕ  ಹಸಿವಿನ ದಾಹ  ಇಂಗಲೇ ಇಲ್ಲ
ಸಮಾರೋಪದವರೆಗೂ !

Wednesday, July 24, 2013


77 ನೆಯ ಸಾಹಿತ್ಯ ಸಮ್ಮೆಳನದಲ್ಲಿ ಸನ್ಮಾನ





ಹೊರಗೆ ಪೋಲೀಸರ ಕೋಟೆ
'
ಅತಿಥೀಗಳೋ ಅಭ್ಯಾಗತರೋ
ಏನೂ ಅರಿವೆವು
ಕಣ್ಣಿಗೆ ಕಾಣುವ ಬ್ಯಾದ್ಜ್ ಒಂದೇ ಸತ್ಯ"

ಹೊರಗೆ ಅವಮಾನ ಪೋಲೀಸರಿಂದ
ಒಳಗೆ ಸನ್ಮಾನ ಪರಿಷತ್ತಿನಿಂದ

ಸನ್ಮಾನ ಮುಗಿಸಿ ಹೊರನಡೆದರೆ
ಅಶೋಕ ಚಕ್ರದ ಪೋಲೀಸರೇ ಬರುತ್ತಾರೆ
"
ಭಾರವೇ ಮೇಡಮ್ ಸನ್ಮಾನ "
ಎನ್ನುತ್ತಾ ನೆರವು ನೀಡುತ್ತಾರೆ.
ಕಾಯಿಯೂ ಬಳ್ಳಿಗೆ ಬಾರ ಅಪರೂಪಕ್ಕೆ.

Saturday, March 16, 2013


ಅಕ್ಕ ಯಾಕಲ್ಲ?

ನಮ್ಮ ಮೊಗಸಾಲೆ ಮುಂದೆ
ಜುಳು ಜುಳು ಎಂದು ಹರಿವ ಸುಗ್ಗಿಯ ತೋಡನೀರು
ಹಾವು  ಸರಿದಂತೆ
ಕಾದ ನೆಲಮೇಲೆ ಮೆಲ್ಲ ಮೆಲ್ಲನೆ
ತೋಡು ತುಂಬಿದರೆ
ಕಿಲ ಕಿಲ ನಗುತ್ತಾ
ನೀರಿಗೆ ಜಿಗಿವಾಗ
ನೀರೂ ನೆಗೆಯುತ್ತಿತ್ತು ಖುಷಿಗೊಂಡು ತುಳುಕುತ್ತಿತ್ತು
ಹನಿ ಹನಿಯಾಗಿ ಗುಳ್ಳೆಗಳಾಗಿ
ನೆಗೆಯುತ್ತಿತ್ತು

ಹೆಣ್ಣು ಗಂಡೆಂಬ ಭೇದ ವಿಲ್ಲದೆ
ಮೊಗಸಾಲೆಯ ಮಂಚದಿಂದ
ಅಂಗಿ ಬಿಚ್ಚಿದ ಬಾಲ ಬಾಲೆಯರ
ನೀರಲ್ಲಿ ಥಕಥೈ ಕುಣಿತ .
ನೀರೆರಚಿ ಹಾರಾಡಿ ಚೀರಾಡಿ
ಬಾಕಿಮಾರಿನ ಕಟ್ಟೆ ಒಡೆದಾಗ
ಹುಣಸೆ ಮರದ ಚಾಟಿ ಹಿಡಿದು
ಬರುವ ನಿಯಂತ್ರಕರು.
‘ಗೊಮ್ಮಟಗಳೇ” ಎಂದು ಗದರಿದ್ದು  ಬಾಲರಿಗೆ
‘ಧಗಣೆಗಳೇ’ ಎಂದದ್ದು  ಬಾಲೆಯರಿಗೆ
ಬಾಲೆಯರು ‘ಅಕ್ಕ’ ಯಾಕಲ್ಲ?

`ಸೇಸಿ ‘ ಎಳತ್ತೂರು


                ಅಮ್ಮ

ನನ್ನಮ್ಮನ ಗರ್ಭದಲ್ಲಿ ನಾನು  ಅಣುವಾಗಿ ಮೂಡುವಲ್ಲಿ
ಅಪ್ಪನ ಪಾಲು ಇದ್ದರೂ ಅದು ಆತ ಪಡೆದ ಆನಂದದ ಅನುಭೂತಿ!
ಬೀಜಾಂಕುರವಾಗಿ ಗರ್ಭದಲ್ಲಿ ಅಮ್ಮ ಉಣ್ಣುವ ತುತ್ತು
ಒಡಲು ಸೇರದಂತೆ ತಡೆದಿದ್ದೆ!
ಬಹಿಷ್ಕರಿಸಿ ಪರೀಕ್ಷಿಸಿದ್ದೆ.
ಅಮ್ಮನ ಮೋಹವನ್ನು.
ಅಮ್ಮನಿಗೆ ಆನಂದ
ಬಸಿರೊಳಗಿನ ಹಸುಳೆ ಒದ್ದರೂ!
ಕಂದನ ಮೇಲೆ ಮುನಿಸಿಲ್ಲ.
ತುತ್ತು ಉಣ್ಣಲಾಗದೆ
ತಿಂಗಳು ಒಂಬತ್ತೂ
ಸಹಿಸಿದಳು ವಾಕರಿಕೆಯನ್ನು
ಬಸಿರು ಸವರುತ್ತಾ.
ಇಡುವ ಹೆಜ್ಜೆಗತಿಯಲ್ಲೂ ಒಡಲ ಕಂದಗೆ
ನೋವಾಗದಿರಲೆಂಬ ಎಚ್ಚರ!
ಒಡಲ ಕುಡಿಯನ್ನು ಮಡಿಲಿಗಿಳಿಸಲು ಬಯಸಿದಾಗ
ಮೃತ್ಯು ದರ್ಶನ! ಬೆಚ್ಚಿದಳು !
ಎಚ್ಚರಗೊಂಡಾಗ  ನನ್ನ ಕಂಡು ನೋವ ಮರೆತಳು
ಮನದಾಳದ ಆನಂದ ಹಂಚಿದಳು
ನನ್ನೊಂದಿಗೆ  ಒಂದು ನೋಟದಲ್ಲಿ
ಆದರೂ ನನ್ನ ಅಸ್ಮಿತೆಗೆ ಅಪ್ಪನ ಹೆಸರು
ಆಸ್ವತ್ರೆಯಲ್ಲಿ ಶಾಲೆಯಲ್ಲಿ ದಾಖಲೆಗಳಲ್ಲಿ !
*****
‘ಸೇಸಿ’ ಎಳತ್ತೂರು

ನಂ. ಕೃಷ್ನಾ ರೆಸಿಡೆನ್ಸಿ
4ನೆಯ ತಿರುವು
ಅಮರಜ್ಯೋತಿನಗರ
ವಿಜಯನಗರ ಬೆಂಗಳೂರು 560040